alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಸಯಾಮಿ ಶಿಶುಗಳಿಗೆ ಒಂದೇ ಲಿವರ್

conjoined-twins-born-in-agra_5085c244-cca1-11e5-9f1f-e42e029c5977

ಪ್ರಕೃತಿ ಎಂಬುದು ಒಂದು ಅಚ್ಚರಿ. ಇಲ್ಲಿ ನಡೆಯುವ ಹಲವು ಘಟನೆಗಳು ಕೌತುಕವನ್ನು ಹುಟ್ಟು ಹಾಕುತ್ತವೆ. ಇದಕ್ಕೆ ತಾಜಾ ನಿದರ್ಶನವೆಂಬಂತೆ ಪಂಜಾಬ್ ಮೂಲದ ಮಹಿಳೆಯೊಬ್ಬರು ಅಪರೂಪದ ಸಯಾಮಿ ಮಕ್ಕಳಿಗೆ ಜನ್ಮ ನೀಡಿದ್ದು ಹೊಟ್ಟೆಯಲ್ಲೇ ಒಂದಕ್ಕೊಂದು ಅಂಟಿಕೊಂಡಿರುವ ಈ ಅವಳಿ ಮಕ್ಕಳಿಗೆ ಎರಡು ಹೃದಯ ಮತ್ತು ಎರಡು ಶ್ವಾಸಕೋಶಗಳಿದ್ದರೂ ಒಂದೇ ಲಿವರ್ ಹೊಂದುವ ಮೂಲಕ ವಿಸ್ಮಯಕ್ಕೆ ಕಾರಣವಾಗಿದೆ.

ಮೋಹಿನಿ ಸಿಂಗ್ ಎಂಬುವವರು ಆಗ್ರಾದ ಆಸ್ಪತ್ರೆಯಲ್ಲಿ ಸಯಾಮಿ ಶಿಶುಗಳಿಗೆ ಜನ್ಮ ನೀಡಿದ್ದು, ಒಂದೇ ಲಿವರ್ ಹೊಂದಿವೆ. ಆದರೆ ಸಯಾಮಿಗಳಾಗಿದ್ದರೂ ಎರಡು ಹೃದಯವಿದ್ದು ಇತರೆ ಅಂಗಾಂಗಗಳು ಆರೋಗ್ಯವಾಗಿರುವ ಕಾರಣ 6 ತಿಂಗಳ ಒಳಗೆ ಮಕ್ಕಳನ್ನು ಬೇರ್ಪಡಿಸಿದರೆ ಅವು ಜೀವಂತವಾಗಿರುತ್ತವೆ ಎಂದು ವೈದ್ಯರು ಹೇಳಿದ್ದಾರೆ.

ಮೋಹಿನಿ ಅವರ ಪತಿ ಪ್ರದೀಪ್ ಸಿಂಗ್ ದಿನಗೂಲಿ ನೌಕರನಾದ ಕಾರಣ ಹೆಂಡತಿ ಗರ್ಭಿಣಿಯಾಗಿದ್ದಾಗ, ಪ್ರತಿ ತಿಂಗಳ ಚೆಕ್ ಅಪ್ ಆಗಲಿ, ಅಲ್ಟ್ರಾ ಸೌಂಡ್ ಪರೀಕ್ಷೆಯಾಗಲಿ ಮಾಡಿಸುವ ಸಾಮರ್ಥ್ಯವನ್ನೂ ಹೊಂದಿರಲಿಲ್ಲ. ಅಷ್ಟೇ ಅಲ್ಲ, ಇದೀಗ ಶಸ್ತ್ರಚಿಕಿತ್ಸೆಯ ವೆಚ್ಛವನ್ನು ಭರಿಸುವುದು ಸಹ ಈ ದಂಪತಿಗಳಿಗೆ ಕಷ್ಟವಾಗಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...