alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ಬಗ್ಗೆ ಅವಹೇಳನಕಾರಿ ಜೋಕ್ ಮಾಡಿದ ಕಾಂಗ್ರೆಸ್ ಗೆ ತರಾಟೆ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವೈಯಕ್ತಿಕ ನಿಂದನೆ ಹಾಗೂ ಅವಹೇಳನಕಾರಿ ಹೇಳಿಕೆ ನೀಡಿದ ಕಾಂಗ್ರೆಸ್ ಯುವ ಘಟಕದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಪ್ರಧಾನಿ ಮೋದಿ ಚಹಾ ಮಾರುತ್ತಿದ್ರು ಎಂಬ ಬಗ್ಗೆ ಕಾಂಗ್ರೆಸ್ ವ್ಯಂಗ್ಯ ಮಾಡಿತ್ತು.

ಇಂಡಿಯನ್ ಯೂತ್ ಕಾಂಗ್ರೆಸ್ ನ ಆನ್ ಲೈನ್ ಮ್ಯಾಗಜೀನ್ ‘ಯುವ ದೇಶ್’ ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಲಾಗಿದೆ. ಮೋದಿ, ಅಮೆರಿಕ ಅಧ್ಯಕ್ಷ ಟ್ರಂಪ್ ಹಾಗೂ ಬ್ರಿಟನ್ ಪ್ರಧಾನಿ ಥೆರೆಸಾ ಮೇ ಗಂಭೀರ ಚರ್ಚೆಯಲ್ಲಿ ತೊಡಗಿರುವಂತೆ ಚಿತ್ರಿಸಲಾಗಿದೆ.

ಮೋದಿ ಮೆಮೆ ಎಂಬ ಪದವನ್ನು ತಪ್ಪಾಗಿ ಉಚ್ಛರಿಸಿದಂತೆ, ಅದನ್ನು ಟ್ರಂಪ್ ತಿದ್ದಿದಂತೆ ಬರೆಯಲಾಗಿದೆ. ನಂತರ ಥೆರೆಸೇ ಮೇ, ಮೋದಿ ಬಳಿ ನೀನು ಚಹಾ ಮಾರು ಸಾಕು ಎಂದು ನುಡಿದಂತೆ ಚಿತ್ರಿಸಲಾಗಿದೆ. ಹಲವು ರಾಜಕಾರಣಿಗಳು ಕೂಡ ಕಾಂಗ್ರೆಸ್ ಕೃತ್ಯವನ್ನು ಟೀಕಿಸಿದ್ದಾರೆ.

ಗುಜರಾತ್ ಸಿಎಂ ವಿಜಯ್ ರೂಪಾನಿ, ಜಮ್ಮು-ಕಾಶ್ಮೀರ ಮಾಜಿ ಸಿಎಂ ಓಮರ್ ಅಬ್ದುಲ್ಲಾ, ಕಾಂಗ್ರೆಸ್ ಮಾಡಿರೋ ಹಾಸ್ಯ ತೀರಾ ಕೆಳಮಟ್ಟದ್ದು ಅಂತಾ ಟ್ವೀಟ್ ಮಾಡಿದ್ದಾರೆ. ಕೊನೆಗೆ ಎಚ್ಚೆತ್ತ ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಚತುರ್ವೇದಿ, ಕ್ಷಮೆ ಕೋರಿ ಟ್ವೀಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...