alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಗ್ರೆಸ್ ಆಕ್ರೋಶಕ್ಕೆ ಕಾರಣವಾಗಿದೆ ಈ ಕಮೆಂಟ್

netaji birth place museum

ಕಟಕ್: ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಹುಟ್ಟೂರಿನಲ್ಲಿ ಸ್ಥಾಪಿಸಲಾಗಿರುವ ಮ್ಯೂಸಿಯಂ ನಲ್ಲಿನ ‘ಸಂದರ್ಶಕರ ಪುಸ್ತಕ’ ದಲ್ಲಿ ವ್ಯಕ್ತಿಯೊಬ್ಬರು, ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ವಿರುದ್ದ ಅವಹೇಳನಾಕಾರಿ ಅಭಿಪ್ರಾಯ ದಾಖಲಿಸಿದ್ದು ಕಾಂಗ್ರೆಸ್ ಪಕ್ಷದ ಆಕ್ರೋಶಕ್ಕೆ ಕಾರಣವಾಗಿದೆ.

ಮ್ಯೂಸಿಯಂ ಗೆ ಭೇಟಿ ನೀಡಿದ್ದ ಭುವನೇಶ್ವರದ ಪ್ರಮೋದ್ ರಂಜನ್ ಡೇ ಎಂಬವರು ಬಳಿಕ ಅಲ್ಲಿನ ‘ಸಂದರ್ಶಕರ ಪುಸ್ತಕ’ ದಲ್ಲಿ ತಮ್ಮ ಅಭಿಪ್ರಾಯವನ್ನು ದಾಖಲಿಸುವ ವೇಳೆ, ನೆಹರು ವಿರುದ್ದ ಅವಹೇಳನಾಕಾರಿ ಪದಗಳನ್ನು ಬಳಸಿದ್ದಾರೆಂದು ಹೇಳಲಾಗಿದೆ. ಜೊತೆಗೆ ತಮ್ಮ ವಿಳಾಸ, ಮೊಬೈಲ್ ನಂಬರ್ ಹಾಗೂ ಇ ಮೇಲ್ ಐಡಿಯನ್ನೂ ನಮೂದಿಸಿದ್ದಾರೆಂದು ತಿಳಿದುಬಂದಿದೆ.

ಇತ್ತೀಚೆಗೆ ಮಾಜಿ ಕೇಂದ್ರ ಸಚಿವ ಜೈರಾಂ ರಮೇಶ್, ಈ ಮ್ಯೂಸಿಯಂ ಗೆ ಭೇಟಿ ನೀಡಿದ್ದು, ಸಂದರ್ಶಕರ ಪುಸ್ತಕದಲ್ಲಿ ತಮ್ಮ ಅಭಿಪ್ರಾಯ ಬರೆಯುವ ವೇಳೆ ಅವರ ಕಣ್ಣಿಗೆ ಈ ಬರಹ ಕಂಡು ಬಂದಿದೆ. ಇದೀಗ ಸ್ಥಳೀಯ ಕಾಂಗ್ರೆಸ್ ನಾಯಕರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಪ್ರಮೋದ್ ರಂಜನ್ ಡೇ ಎಂಬ ವ್ಯಕ್ತಿಯೇ ಈ ರೀತಿ ಬರೆದಿದ್ದಾರೆಯೋ ಅಥವಾ ಬೇರೆಯವರು ಅವರ ವಿಳಾಸ ನಮೂದಿಸಿ ಈ ಕೃತ್ಯವೆಸಗಿದ್ದಾರೆಯೇ ಎಂಬುದರ ಕುರಿತು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...