alex Certify
ಕನ್ನಡ ದುನಿಯಾ       Mobile App
       

Kannada Duniya

ಅಚಾನಕ್ ನಾಪತ್ತೆಯಾದ ನವಜೋತ್ ಸಿಂಗ್ ಸಿದ್ದು.!

kabul-9-1

ಪಂಚ ರಾಜ್ಯಗಳ ಚುನಾವಣಾ ಕಣ ರಂಗೇರುತ್ತಿದೆ. ರಾಜಕೀಯ ಪಕ್ಷಗಳು ಎದ್ದು ನಿಂತಿವೆ. ಆವಾಜ್ ಎ ಪಂಜಾಬ್ ಹೆಸರಿನ ಹೊಸ ಪಕ್ಷ ಕಟ್ಟಿ ಪಂಜಾಬ್ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಮಾಡಿದ್ದ ನವಜೋತ್ ಸಿಂಗ್ ಸಿದ್ದು ಮಾತ್ರ ಪತ್ತೆಯಿಲ್ಲ.

ಬಿಜೆಪಿಯಿಂದ ಹೊರಬಂದು ಹೊಸ ಪಕ್ಷ ಕಟ್ಟಿದ ನವಜೋತ್ ಸಿಂಗ್ ಸಿದ್ದು, ಪಂಜಾಬ್ ಜನತೆಗಾಗಿ ತಮ್ಮನ್ನು ಮೀಸಲಿಡುವುದಾಗಿ ತಿಳಿಸಿದ್ದರು. ನಂತ್ರ ಆಮ್ ಆದ್ಮಿ ಪಕ್ಷ ಸೇರುವುದಾಗಿ ಘೋಷಣೆ ಮಾಡಿದ್ದರು. ದೆಹಲಿಯಲ್ಲಿ ನಡೆದ ಮಾತುಕತೆ ವಿಫಲವಾದ ನಂತ್ರ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು.

ಕಾಂಗ್ರೆಸ್ ಜೊತೆ ಕೈ ಜೋಡಿಸಲು ಮುಂದಾದ ಸಿದ್ದು, ಜನವರಿ 10ರಂದು ಕಾಂಗ್ರೆಸ್ ಸೇರ್ಪಡೆಗೊಳ್ಳುವವರಿದ್ದರು. ಆದ್ರೆ ಜನವರಿ 10ರಂದು ಸಿದ್ದು ನಾಪತ್ತೆ. ದಿನವಿಡಿ ಸಿದ್ದು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಜನವರಿ 13 ರಂದು ಸಿದ್ದು ಕೈ ಹಿಡಿಯುತ್ತಾರೆ ಎನ್ನಲಾಗ್ತಾ ಇದೆ. ಪಂಜಾಬ್ ನಲ್ಲಿ ಚುನಾವಣೆ ಹತ್ತಿರವಾಗ್ತಾ ಇದ್ದು, ಸಿದ್ದು ನಿರ್ಧಾರ ಮಹತ್ವ ಪಡೆದಿದೆ. ಸಿದ್ದು ಕಾಂಗ್ರೆಸ್ ಕೈ ಹಿಡಿದಲ್ಲಿ ಬಿಜೆಪಿಗೆ ಸ್ವಲ್ಪ ಮಟ್ಟಿನ ಹೊಡೆತ ಬೀಳುವ ಸಾಧ್ಯತೆ ಇದೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...