alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಜೆಪಿಗೆ ಹರಿದು ಬಂದ ದೇಣಿಗೆ ಬರೋಬ್ಬರಿ 437.35 ಕೋಟಿ ರೂ..!

458660-bjpflags

ದೇಶದ ವಿವಿಧ ಪ್ರಮುಖ ರಾಜಕೀಯ ಪಕ್ಷಗಳಿಗೆ ಬಂದಿರುವ ದೇಣಿಗೆ ವಿವರವನ್ನು ಬಿಡುಗಡೆ ಮಾಡಲಾಗಿದ್ದು, ಮೊದಲ ಸ್ಥಾನದಲ್ಲಿರುವ ಭಾರತೀಯ ಜನತಾ ಪಕ್ಷಕ್ಕೆ ಬರೋಬ್ಬರಿ 437.35 ಕೋಟಿ ರೂಪಾಯಿಗಳಷ್ಟು ದೇಣಿಗೆ ಹರಿದುಬಂದಿದೆ.

1234 ಉದ್ಯಮಿಗಳು ಹಾಗೂ ವ್ಯಕ್ತಿಗಳು 2014-15 ರಲ್ಲಿ ಇಷ್ಟು ಹಣವನ್ನು ಬಿಜೆಪಿ ಗೆ ದೇಣಿಗೆಯಾಗಿ ನೀಡಿದ್ದರೆ, ಕಾಂಗ್ರೆಸ್ ಪಕ್ಷಕ್ಕೆ ಇದೇ ಸಾಲಿನಲ್ಲಿ 192 ಮಂದಿಯಿಂದ 138.98 ಕೋಟಿ ರೂಪಾಯಿ ದೇಣಿಗೆ ಬಂದಿದ್ದು, ಚೆಕ್ ಹಾಗೂ ಡಿಡಿ ಯ ವಿವರಗಳನ್ನು ಆ ಪಕ್ಷ ನೀಡಿಲ್ಲವೆಂದು ತಿಳಿದುಬಂದಿದೆ.

ಕುತೂಹಲಕರ ಸಂಗತಿಯೆಂದರೆ ಆಮ್ ಆದ್ಮಿ ಪಕ್ಷ, 2013-14 ಹಾಗೂ 2014-15 ರಲ್ಲಿ ಒಟ್ಟು 44.71 ಕೋಟಿ ರೂ. ದೇಣಿಗೆಯನ್ನು ಪಡೆದಿದ್ದು, ಅದರಲ್ಲಿ ಶೇ.24.65 ರಷ್ಟು ಹಣ ವಿದೇಶದಿಂದ ಬಂದಿದೆ. ತಮಗೆ ದೇಣಿಗೆ ನೀಡಿದವರ ಪೈಕಿ 111 ಮಂದಿಯ ವಿವರವನ್ನು ನೀಡಲು ಆಪ್ ವಿಫಲವಾಗಿದ್ದರೂ ತಮ್ಮಲ್ಲಿ ಲಭ್ಯವಿದ್ದ ದೇಣಿಗೆ ನೀಡಿರುವವರ ಪಟ್ಟಿಯಲ್ಲಿ 20,000 ಕ್ಕಿಂತ ಕಡಿಮೆ ಹಣ ನೀಡಿದವರ ಮಾಹಿತಿಯನ್ನೂ ಆಪ್ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...