alex Certify
ಕನ್ನಡ ದುನಿಯಾ       Mobile App
       

Kannada Duniya

ಗುಜರಾತ್ ನಲ್ಲಿ 21 ದಿನ 15 ರಾತ್ರಿ : 25 ದೇವಸ್ಥಾನಗಳಿಗೆ ಭೇಟಿ ನೀಡಿದ್ದ ರಾಹುಲ್

ಗುಜರಾತ್ ವಿಧಾನಸಭೆಗೆ ನಡೆದ ಚುನಾವಣೆ ಮತ ಎಣಿಕೆ ಈಗಾಗಲೇ ಶುರುವಾಗಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ರಾಜಕೀಯ ಪಕ್ಷಗಳ ಹಣೆಬರಹ ಹೊರ ಬೀಳಲಿದೆ. ಈ ಬಾರಿ ಗುಜರಾತ್ ವಿಧಾನಸಭೆಯನ್ನು ಜಿದ್ದಿನ ಕಣವಾಗಿ ಸ್ವೀಕರಿಸಿದ್ದ ಕಾಂಗ್ರೆಸ್ ಭರ್ಜರಿ ಪ್ರಚಾರ ನಡೆಸಿತ್ತು. ಇದ್ರಲ್ಲಿ ಬಹುಮುಖ್ಯ ಪಾತ್ರವಹಿಸಿದ್ದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ.

ಗುಜರಾತ್ ಚುನಾವಣಾ ದಿನಾಂಕ ಪ್ರಕಟವಾಗುವ ಮುನ್ನವೇ ಗುಜರಾತ್ ರಣಾಂಗಣಕ್ಕೆ ಧುಮುಕಿದ್ದ ರಾಹುಲ್ ಗಾಂಧಿ, ಕೊನೆ ಹಂತದವರೆಗೂ ಭರ್ಜರಿ ಪ್ರಚಾರ ನಡೆಸಿದ್ರು. ಮತದಾರರ ಮನ ಸೆಳೆಯಲು ಇನ್ನಿಲ್ಲದ ಕಸರತ್ತು ಮಾಡಿದ್ರು. ಮಾಹಿತಿಗಳ ಪ್ರಕಾರ 182 ವಿಧಾನಸಭಾ ಕ್ಷೇತ್ರಗಳ ಪೈಕಿ ರಾಹುಲ್ ಗಾಂಧಿ 135 ವಿಧಾನಸಭಾ ಕ್ಷೇತ್ರಗಳಿಗೆ ಪ್ರತ್ಯಕ್ಷವಾಗಿ ಭೇಟಿ ನೀಡಿ ಪ್ರಚಾರ ಮಾಡಿದ್ದಾರೆ.

42 ಕ್ಷೇತ್ರಗಳಲ್ಲಿ ಅಪ್ರತ್ಯಕ್ಷವಾಗಿ ಮತಯಾಚನೆ ಮಾಡಿದ ರಾಹುಲ್ ಒಟ್ಟು 177 ಕ್ಷೇತ್ರಗಳಲ್ಲಿ ಮತಬೇಟೆ ನಡೆಸಿದ್ದಾರೆ. ರೋಡ್ ಶೋ, ಹಳ್ಳಿಗಳಿಗೆ ಭೇಟಿ, ಸಾರ್ವಜನಿಕ ಸಭೆಗಳ ಜೊತೆಗೆ ದೇವಸ್ಥಾನಗಳಿಗೆ ಭೇಟಿ ನೀಡಿ ತಮ್ಮ ರಣತಂತ್ರ ಪ್ರದರ್ಶನ ಮಾಡಿದ್ರು.

ನವಸರ್ಜನ್ ಯಾತ್ರೆ ಹೆಸರಿನಲ್ಲಿ 2017ರಲ್ಲಿ 21 ದಿನಗಳು ಹಾಗೂ 15 ರಾತ್ರಿಗಳನ್ನು ರಾಹುಲ್ ಗುಜರಾತಿನಲ್ಲಿ ಕಳೆದಿದ್ದಾರೆ. ಪ್ರಚಾರಕ್ಕಾಗಿ ದೇವಸ್ಥಾನವನ್ನು ಈ ಬಾರಿ ರಾಹುಲ್ ಆಯ್ಕೆ ಮಾಡಿಕೊಂಡಿದ್ದು ವಿಶೇಷವಾಗಿತ್ತು. ಬೇರೆ ಬೇರೆ ಪ್ರದೇಶಗಳಲ್ಲಿ ಒಟ್ಟು 25 ದೇವಸ್ಥಾನಗಳಿಗೆ ಭೇಟಿ ನೀಡಿದ್ದರು ರಾಹುಲ್.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...