alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಗ್ರೆಸ್ ಪಕ್ಷದ ಆ್ಯಪ್ ನಲ್ಲೂ ಡೇಟಾ ಸೋರಿಕೆ

ಕಾಂಗ್ರೆಸ್ ಪಕ್ಷದ ಅಧಿಕೃತ ಆ್ಯಪ್ ನಲ್ಲೂ ಡೇಟಾ ಸೋರಿಕೆ ಆಗ್ತಿದೆ ಅನ್ನೋದನ್ನು ಫ್ರಾನ್ಸ್ ನ ಹ್ಯಾಕರ್ ಗಳ ಟ್ವಿಟ್ಟರ್ ಖಾತೆಯಲ್ಲಿ ಬಹಿರಂಗಪಡಿಸಲಾಗಿದೆ. ಅದರ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ಗೂಗಲ್ ಪ್ಲೇ ಸ್ಟೋರ್ ನಿಂದ ತನ್ನ ಆ್ಯಪ್ ಅನ್ನು ಹಿಂಪಡೆದಿದೆ.

ಫ್ರೆಂಚ್ ಹ್ಯಾಕರ್ ಇಲಿಯಟ್ ಅಲ್ಡರ್ಸನ್ ಎಂಬಾತ ಈ ಬಗ್ಗೆ ಟ್ವೀಟ್ ಮಾಡಿದ್ದ. INC Indiaದ ಅಧಿಕೃತ ಆ್ಯಪ್ ನಲ್ಲಿ ಸದಸ್ಯತ್ವಕ್ಕಾಗಿ ಅರ್ಜಿ ಹಾಕಿದಲ್ಲಿ ನಿಮ್ಮ ವೈಯಕ್ತಿಯ ವಿವರಗಳೆಲ್ಲ ಮೂರನೇ ವ್ಯಕ್ತಿಯ ಕೈಸೇರುತ್ತವೆ ಅಂತಾ ಎಚ್ಚರಿಸಿದ್ದ.

ತನ್ನ ಟ್ವೀಟ್ ಬಳಿಕ ಕಾಂಗ್ರೆಸ್ ಪಕ್ಷ ಆ್ಯಪ್ ಅನ್ನು ಗೂಗಲ್ ಸ್ಟೋರ್ ನಿಂದ ಹಿಂಪಡೆದಿರುವುದನ್ನೂ ಇಲಿಯಟ್ ಸಾಮಾಜಿಕ ತಾಣದಲ್ಲಿ ಬಹಿರಂಗಪಡಿಸಿದ್ದಾನೆ. ಈ ಹಿಂದೆ ನರೇಂದ್ರ ಮೋದಿ ಆ್ಯಪ್ ನಲ್ಲಿ ಡೇಟಾ ಸೋರಿಕೆ ಆಗ್ತಿದೆ ಅಂತಾ ಹೇಳಲಾಗಿತ್ತು.

ಅದರ ಬೆನ್ನಲ್ಲೇ ಮೋದಿ ವಿರುದ್ಧ ಹರಿಹಾಯ್ದಿದ್ದ ರಾಹುಲ್, ನಮೋ ಆ್ಯಪ್ ಡಿಲೀಟ್ ಮಾಡುವಂತೆ ಕರೆಕೊಟ್ಟಿದ್ದರು. ಇದೀಗ ಕಾಂಗ್ರೆಸ್ ಪಕ್ಷವೇ ಖುದ್ದು ತನ್ನ ಆ್ಯಪ್ ಡಿಲೀಟ್ ಮಾಡಿರುವುದನ್ನು ಬಿಜೆಪಿ ಲೇವಡಿ ಮಾಡಿದೆ. ಆ್ಯಪ್ ಮೂಲಕ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಮಾಡುತ್ತಿಲ್ಲ ಅಂತಾ ನಟಿ ರಮ್ಯ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...