alex Certify
ಕನ್ನಡ ದುನಿಯಾ       Mobile App
       

Kannada Duniya

ಹುಟ್ಟುಹಬ್ಬದ ಸ್ಪೆಷಲ್ : ರಾಹುಲ್ ಗಾಂಧಿ ಬಗ್ಗೆ ಇದು ತಿಳಿದಿರಲಿ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 49 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಸಾಮಾನ್ಯವಾಗಿ ರಾಹುಲ್ ತಮ್ಮ ಹುಟ್ಟುಹಬ್ಬವನ್ನು ಸ್ನೇಹಿತರ ಜೊತೆ ಆಚರಿಸುತ್ತಿದ್ದರು. ಇದೇ ಮೊದಲ ಬಾರಿ ರಾಹುಲ್ ಗಾಂಧಿ ದೆಹಲಿ ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ಪಕ್ಷದ ಸದಸ್ಯರ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.

ಈ ಹಿನ್ನೆಲೆಯಲ್ಲಿ ಇಡೀ ದಿನವನ್ನು ರಾಹುಲ್ ಗಾಂಧಿ ಕಾಂಗ್ರೆಸ್ ಕಚೇರಿಯಲ್ಲೇ ಕಳೆಯಲಿದ್ದಾರೆ. ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಘಟಕ ಸೇರಿದಂತೆ ಕಾಂಗ್ರೆಸ್ ನಾಯಕರು ಅನೇಕ ಕಾರ್ಯಕ್ರಮಗಳ ಆಯೋಜನೆ ಮಾಡಿದ್ದಾರೆ. 2019 ರ ಸಾರ್ವಜನಿಕ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿದ್ದರು ಅಗತ್ಯಬಿದ್ರೆ ಪ್ರಧಾನಿ ಪಟ್ಟಕ್ಕೇರುತ್ತೇನೆಂದು ಘೋಷಣೆ ಮಾಡಿರುವ ರಾಹುಲ್ ಬಗ್ಗೆ ತಿಳಿದುಕೊಳ್ಳಬೇಕಾಗಿದ್ದು ಸಾಕಷ್ಟಿದೆ.

ಜೂನ್ 19, 1970 ರಲ್ಲಿ ಜನಿಸಿದ ರಾಹುಲ್ ಗಾಂಧಿಗೆ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಈ ವಿಚಾರ ಹಿಂದಿನ ವರ್ಷ ಗೊತ್ತಾಗಿದೆ. ಬಾಕ್ಸರ್ ವಿಜೇಂದ್ರ ಕುಮಾರ್ ಕ್ರೀಡೆಯಲ್ಲಿ ನಿಮಗೆ ಆಸಕ್ತಿಯಿದೆಯಾ ಎಂದು ರಾಹುಲ್ ಗೆ ಪ್ರಶ್ನೆ ಮಾಡಿದ್ದರು. ಯಸ್ ಎಂದಿದ್ದ ರಾಹುಲ್ Aikidoದಲ್ಲಿ ನಾನು ಬ್ಲಾಕ್ ಬೆಲ್ಟ್ ಪಡೆದಿದ್ದೇನೆ ಎಂದಿದ್ದರು. ನಂತ್ರ ಸಾಮಾಜಿಕ ಜಾಲತಾಣಗಳಲ್ಲಿ ಜಪಾನ್ ಮಾರ್ಷಲ್ ಆರ್ಟ್ಸ್ Aikido ವಿಡಿಯೋವನ್ನು ರಾಹುಲ್ ಹಂಚಿಕೊಂಡಿದ್ದರು.

ಬ್ರಿಟನ್ ನ ಕೇಂಬ್ರಿಜ್ ವಿಶ್ವವಿದ್ಯಾನಿಲಯದಲ್ಲಿ ರಾಹುಲ್ ಡೆವಲ್ಪ್ಮೆಂಟ್ ಸ್ಟಡಿಯಲ್ಲಿ ಎಂಪಿಎಲ್ ಮುಗಿಸಿದ್ದಾರೆ. ಅಮೆರಿಕಾದ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲೂ ರಾಹುಲ್ ಅಧ್ಯಯನ ಮಾಡಿದ್ದಾರೆ.

ಪುಸ್ತಕ ಓದುವ ಹವ್ಯಾಸ ಹೊಂದಿರುವ ರಾಹುಲ್ ಗೆ ಮೊಮೊಸ್ ಎಂದ್ರೆ ತುಂಬಾ ಇಷ್ಟವಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...