alex Certify
ಕನ್ನಡ ದುನಿಯಾ       Mobile App
       

Kannada Duniya

ಸದನದಲ್ಲಿ ಪೇಪರ್ ತೂರಿದ ಶಾಸಕನ ಸಸ್ಪೆಂಡ್

maharastra assemblyಸದನ ನಡೆಯುತ್ತಿದ್ದ ವೇಳೆ ಪೇಪರ್ ಹರಿದು ಅದನ್ನು ಸಭಾಧ್ಯಕ್ಷರ ಪೀಠದತ್ತ ತೂರಿದ ಕಾಂಗ್ರೆಸ್ ಶಾಸಕರೊಬ್ಬರನ್ನು ಒಂದು ದಿನದ ಮಟ್ಟಿಗೆ ಸದನದಿಂದ ಅಮಾನತು ಮಾಡಿರುವ ಘಟನೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಡೆದಿದೆ.

ಪಶ್ಚಿಮ ಮಲಾಡ್ ನ ಕಾಂಗ್ರೆಸ್ ಶಾಸಕ ಅಸ್ಲಮ್ ಶೇಕ್, ಶಿವಸೇನಾ ಶಾಸಕರೊಬ್ಬರು ಮಹಾದ್ ನ ಕೆರೆಯನ್ನು ಶುದ್ದೀಕರಣಗೊಳಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ತಮ್ಮ ಕೈಯಲ್ಲಿದ್ದ ಕಾಗದವನ್ನು ಹರಿದು ಹಾಕಿ ಸಭಾಧ್ಯಕ್ಷರ ಪೀಠದತ್ತ ತೂರಿದರು.

ಆಗ ಸಭಾಧ್ಯಕ್ಷರ ಪೀಠದಲ್ಲಿದ್ದ ಯೋಗೇಶ್ ಸಾಗರ್, ಸದನದಲ್ಲಿ ಈ ರೀತಿ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರಲ್ಲದೇ ಒಂದು ದಿನದ ಮಟ್ಟಿಗೆ ಸದನದಿಂದ ಸಸ್ಪೆಂಡ್ ಮಾಡಿರುವುದಾಗಿ ಘೋಷಿಸಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...