alex Certify
ಕನ್ನಡ ದುನಿಯಾ       Mobile App
       

Kannada Duniya

ರಾಹುಲ್ ಗಾಂಧಿಗೆ ವಿಮಾನ ಕೊಳ್ಳಲು ಮನೆ ಮಾರಲು ಮುಂದಾದ ಕಾಂಗ್ರೆಸ್ ಕಾರ್ಯಕರ್ತ

ಪತ್ರಿಕೆಗಳಲ್ಲಿ ವಿವಿಧ ಪಕ್ಷಗಳು ಜಾಹೀರಾತು ನೀಡೋದು ಸಾಮಾನ್ಯ. ಪಕ್ಷಗಳು ತಮ್ಮ ಸಾಧನೆ ಹೇಳಿಕೊಳ್ಳಲು, ನಾಯಕರಿಗೆ ಶುಭಕೋರಲು ಜಾಹೀರಾತು ನೀಡುತ್ತವೆ. ಆದ್ರೆ ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಕಾರ್ಯಕರ್ತ ನೀಡಿದ ಜಾಹೀರಾತು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಹೌದು….ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪ್ರಯಾಣಕ್ಕಾಗಿ ಸುರಕ್ಷಿತವಾದ ವಿಮಾನ ಖರೀದಿ ಮಾಡಲು, ತನ್ನ ಮನೆ, ಅಂಗಡಿ ಮಾರೋದಾಗಿ ಕಾರ್ಯಕರ್ತರೊಬ್ಬರು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ರಾಹುಲ್ ಗಾಂಧಿ, ಖಾಸಗಿ ವಿಮಾನದಲ್ಲಿ ಹುಬ್ಬಳ್ಳಿಗೆ ತೆರಳಿದ್ದರು. ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ಒಂದು ವೇಳೆ ಪೈಲೆಟ್ ಇನ್ನೊಂದು ಕ್ಷಣ ತಡ ಮಾಡಿದ್ದರೆ, ವಿಮಾನ ಹಾರಾಟದ ವೇಳೆ ಪತನಗೊಳ್ಳುತ್ತಿತ್ತು ಎಂದು ಕೇಂದ್ರ ವಿಮಾನಯಾನ ಸಚಿವಾಲಯ ಮಾಹಿತಿ ಬಹಿರಂಗಪಡಿಸಿತ್ತು.

ಈ ಪ್ರಕರಣದ ಹಿನ್ನೆಲೆಯಲ್ಲಿ ಮಧ್ಯ ಪ್ರದೇಶ ಕಾಂಗ್ರೆಸ್ ಕಾರ್ಯಕರ್ತ ಅಶೋಕ್ ಜೆಸ್ವಾಲ್, ಪಕ್ಷದ ಕಾರ್ಯಕರ್ತರೆಲ್ಲರೂ ಹಣ ಸಂಗ್ರಹಿಸಿ ಯುವ ನಾಯಕನಿಗೆ ಹೊಸ ತಂತ್ರಜ್ಞಾನದ ವಿಮಾನ ಕೊಡಿಸುವ ಇರಾದೆ ಹೊಂದಿರೋದಾಗಿ ಜಾಹೀರಾತಿನಲ್ಲಿ ತಿಳಿಸಿದ್ದಾರೆ.

ಗಾಂಧಿ ಕುಟುಂಬ ದೇಶಕ್ಕಾಗಿ ಸೇವೆ ಮಾಡಿದೆ. ರಾಹುಲ್ ಗಾಂಧಿ ಅವರಿಗೆ ಅತ್ಯಾಧುನಿಕ ವಿಮಾನ ಒದಗಿಸುವಂತೆ ಪ್ರಧಾನಿ ಮೋದಿ ಅವರಿಗೆ ಪತ್ರವನ್ನೂ ಬರೆಯಲಾಗಿದೆ ಎಂದು ತಿಳಿದು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...