alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಧಾನಿ ಮೋದಿ ವಿರುದ್ದ ಭ್ರಷ್ಟಾಚಾರದ ಆರೋಪ ಮಾಡಿದ ಕಾಂಗ್ರೆಸ್

BLINK_ANANDIBEN_2_1922054f

ಸದಾ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಿಡಿ ಕಾರುತ್ತಿದ್ದ ಕಾಂಗ್ರೆಸ್ ಇದೀಗ ಮೋದಿ ಅವರ ವಿರುದ್ದ ಭ್ರಷ್ಟಾಚಾರದ ಆರೋಪ ಮಾಡುವ ಮೂಲಕ ಹೊಸ ರಾಜಕೀಯದ ಅಲೆ ಎಬ್ಬಿಸಲು ಮುಂದಾಗಿದೆ.

ಹೌದು. ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಹಾಲಿ ಮುಖ್ಯ ಮಂತ್ರಿ ಆನಂದಿಬೆನ್ ಪಟೇಲ್ ಪುತ್ರಿಯ ಒಡೆತನದ ಕಂಪನಿಯೊಂದಕ್ಕೆ ಅನಗತ್ಯವಾಗಿ ಅನುಕೂಲಗಳನ್ನು ಮಾಡಿಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

ಅಲ್ಲದೇ 2010-11 ರಲ್ಲಿ ಅಂದರೆ ಮೋದಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ವೈಲ್ಡ್ ಹುಡ್ ಹೆಸರಿನ ಕಂಪನಿಗೆ 250 ಎಕರೆ ಜಮೀನನ್ನು ಮಂಜೂರು ಮಾಡಿದ್ದು, ಈ ಕಂಪನಿ ಆನಂದಿ ಬೆನ್ ಪುತ್ರಿ ಅನಾರ ಪಟೇಲ್ ಒಡೆತನದಲ್ಲಿದೆ. 250 ಎಕರೆ ಜಮೀನಿನ ಅಂದಿನ ಮಾರುಕಟ್ಟೆ ಬೆಲೆ 125 ಕೋಟಿ ರೂಪಾಯಿಗಳಿತ್ತು. ಆದರೆ ಈ ಜಮೀನನ್ನು ಕೇವಲ 1.5 ಕೋಟಿ ರೂಪಾಯಿಗೆ ನೀಡುವ ಮೂಲಕ ಮೋದಿ ಭ್ರಷ್ಟಾಚಾರವೆಸಗಿದ್ದಾರೆ ಎಂದು ಕಿಡಿ ಕಾರಿದೆ.

ಅಲ್ಲದೇ ಈ ಆಸ್ತಿ ಮಾರಾಟದ ವೇಳೆ ಆನಂದಿ ಬೆನ್ ಪಟೇಲ್ ಗುಜರಾತ್‌ ನ ಕಂದಾಯ ಮಂತ್ರಿಯಾಗಿದ್ದು, ಇದೇ ಸಮಯದಲ್ಲಿ ಆಸ್ತಿಯನ್ನು ಮಂಜೂರು ಮಾಡಿಸಿಕೊಂಡು ಸಿಂಹಗಳ ರಕ್ಷಿತಾರಣ್ಯ ಪ್ರದೇಶ ಸಮೀಪವೇ ಇರುವ ಈ ಜಮೀನನ್ನು ಆನಂದಿ ಬೆನ್ ಪಟೇಲ್ ಪುತ್ರಿ ಅನಾರ, ರೆಸಾರ್ಟ್ ನಿರ್ಮಾಣಕ್ಕೆ ಬಳಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...