alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಕಾರ ರಚಿಸುವಂತೆ ಆಹ್ವಾನ ನೀಡಲು ಕೋರಿದ್ದಾರೆ ಈ ಪಕ್ಷದವರು

ಕರ್ನಾಟಕ ರಾಜಕಾರಣದ ಪ್ರಭಾವ ಇದೀಗ, ಗೋವಾ, ಮಣಿಪುರ ಮತ್ತು ಬಿಹಾರ ರಾಜ್ಯಕ್ಕೂ ಹಬ್ಬಿದೆ. ಅಲ್ಲೂ ಕೂಡಾ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕರ್ನಾಟಕದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ ಬಿಜೆಪಿಗೆ ರಾಜ್ಯಪಾಲರು ಸರ್ಕಾರ ರಚಿಸಲು ಆಹ್ವಾನ ನೀಡಿರುವಂತೆ ತಮಗೂ ಅವಕಾಶ ಕೊಡಬೇಕೆಂದು ಪಟ್ಟು ಹಿಡಿದಿವೆ.

ಈ ಸಂಬಂಧ ಬಿಹಾರ ಆರ್ ಜೆ ಡಿ ನಾಯಕರು ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ನೇತೃತ್ವದಲ್ಲಿ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಅವರನ್ನು ಭೇಟಿಯಾಗಿ ಹಕ್ಕು ಮಂಡಿಸಿದ್ದಾರೆ.

ಇತ್ತ ಗೋವಾದಲ್ಲೂ ಸರ್ಕಾರ ರಚಿಸಲು ಅವಕಾಶ ನೀಡುವಂತೆ ಕಾಂಗ್ರೆಸ್, ರಾಜ್ಯಪಾಲೆ ಮೃದುಲಾ ಸಿನ್ಹಾ ಅವರಿಗೆ ಮನವಿ ಸಲ್ಲಿಸಿದೆ. ಈ ಸಂಬಂಧ ಶಾಸಕಾಂಗ ಪಕ್ಷದ ನಾಯಕ ಚಂದ್ರಕಾಂತ್ ಕವ್ಲೇಕರ್ ನೇತೃತ್ವದಲ್ಲಿ 16 ಕಾಂಗ್ರೆಸ್ ಶಾಸಕರು ರಾಜಭವನಕ್ಕೆ ತೆರಳಿ ತಮ್ಮ ಮನವಿ ಸಲ್ಲಿಸಿದ್ದಾರೆ.

ಗೋವಾದಲ್ಲಿ ಮ್ಯಾಜಿಕ್ ನಂಬರ್ 21 ಆಗಿದ್ದು, ತಮಗೆ ರಾಜ್ಯಪಾಲರು ಅವಕಾಶ ಕೊಟ್ಟಲ್ಲಿ ನಾವೂ ಕೂಡಾ ಬಹುಮತ ಸಾಬೀತುಪಡಿಸುತ್ತೇವೆ ಅಂತಾ ಗೋವಾ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ತಿಳಿಸಿದ್ದಾರೆ.

ಗೋವಾದಲ್ಲಿ ಚುನಾವಣೆ ನಡೆದಾಗ 17 ಸ್ಥಾನ ಗಳಿಸುವ ಮೂಲಕ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದ್ರೆ ಬಿಜೆಪಿ 14 ಸೀಟ್ ಗಳಿಸಿದ್ರೂ, ಜಿ ಎಫ್ ಪಿ, ಎಂಜಿಪಿ ಪಕ್ಷಗಳ ಜೊತೆ ಮೂವರು ಪಕ್ಷೇತರ ಅಭ್ಯರ್ಥಿಗಳ ಬೆಂಬಲದಿಂದ ಸರ್ಕಾರ ರಚಿಸಿದೆ.

ಮಣಿಪುರದಲ್ಲೂ ಕಾಂಗ್ರೆಸ್ ನಾಯಕರು ರಾಜ್ಯಪಾಲ ಜಗದೀಶ್ ಮುಖಿ ಅವರನ್ನು ಭೇಟಿಯಾಗಿ ಸರ್ಕಾರ ರಚಿಸಲು ಅನುಮತಿ ಕೊಡುವಂತೆ ಮನವಿ ಸಲ್ಲಿಸಿದ್ದಾರೆ. 2017 ರಲ್ಲಿ ಮಣಿಪುರದಲ್ಲಿ ಚುನಾವಣೆ ನಡೆದಿದ್ದು, ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...