alex Certify
ಕನ್ನಡ ದುನಿಯಾ       Mobile App
       

Kannada Duniya

ಮೈಕ್ ಎಸೆದ ಕಾಂಗ್ರೆಸ್ ಶಾಸಕ, ಸ್ಪೀಕರ್ ಕಣ್ಣಿಗೆ ಹಾನಿ

ಹೈದರಾಬಾದ್: ಯೋಜನೆ ಜಾರಿ, ಸಮಸ್ಯೆಗಳ ಪರಿಹಾರ ಮೊದಲಾದ ವಿಚಾರಗಳ ಕುರಿತಾಗಿ ಸ್ವಾರಸ್ಯಕರ ಚರ್ಚೆ ನಡೆಯಬೇಕಿದ್ದ ಸದನಲ್ಲಿ ನಡೆಯಬಾರದ ಘಟನೆಯೊಂದು ನಡೆದಿದೆ.

ತೆಲಂಗಾಣ ವಿಧಾನಸಭೆ ಅಧಿವೇಶನ ರಣಾಂಗಣವಾಗಿ ಮಾರ್ಪಟ್ಟು, ಕಾಂಗ್ರೆಸ್ ಶಾಸಕ ಎಸೆದ ಮೈಕ್ ತಾಗಿ ಸ್ಪೀಕರ್ ಕಣ್ಣಿಗೆ ಹಾನಿಯಾಗಿದೆ. ಸೋಮವಾರದಿಂದ ಆರಂಭವಾದ ವಿಧಾನಸಭೆ ಬಜೆಟ್ ಅಧಿವೇಶನದಲ್ಲಿ ರಾಜ್ಯಪಾಲ ಇ.ಎಸ್.ಎಲ್. ನರಸಿಂಹನ್ ಮಾತನಾಡುವ ಸಂದರ್ಭದಲ್ಲಿ ವಿರೋಧ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.

ರೈತರ ಸಾಲಮನ್ನಾ, ದಲಿತರಿಗೆ ಜಮೀನು ಹಾಗೂ ಉದ್ಯೋಗದ ವಿಚಾರವಾಗಿ ಚರ್ಚೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಶಾಸಕರು ಧರಣಿ ನಡೆಸಿದ್ದಾರೆ. ಈ ವೇಳೆ ಆಕ್ರೋಶಗೊಂಡ ಕಾಂಗ್ರೆಸ್ ಶಾಸಕ ವೆಂಕಟರೆಡ್ಡಿ ಮೈಕ್ ಕಿತ್ತೆಸೆದಿದ್ದಾರೆ. ಅದು ಸ್ಪೀಕರ್ ಸ್ವಾಮಿ ಗೌಡ ಅವರಿಗೆ ತಾಗಿದ್ದು, ಕಣ್ಣಿಗೆ ಹಾನಿಯಾಗಿದೆ.

ಕೂಡಲೇ ಸ್ವಾಮಿ ಗೌಡ ಅವರನ್ನು ಸರೋಜಿನಿ ದೇವಿ ಕಣ್ಣಿನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಕಣ್ಣಿಗೆ ಭಾಗಶಃ ಹಾನಿಯಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವೆಂಕಟರೆಡ್ಡಿ, ತಾವು ಉದ್ದೇಶಪೂರ್ವಕವಾಗಿ ಹಲ್ಲೆ ಮಾಡಿಲ್ಲ. ಆಕಸ್ಮಿಕವಾಗಿ ಮೈಕ್ ಎಸೆದಿದ್ದೇನೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...