alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಡೋಮ್ ಬೇಕೋ? ಬೇಡ್ವೋ? ಇಬ್ಬರ ನಡುವೆ ಹರಿದಾಡಿತ್ತು ಮೆಸೇಜ್

rape-411

ಹೆಣ್ಣುಮಕ್ಕಳ ರಕ್ಷಣೆಗಾಗಿ ಎಷ್ಟೆಲ್ಲಾ ಕಾನೂನು ರೂಪಿಸಲಾಗಿದೆ. ಕಾನೂನುಗಳು ನೊಂದವರಿಗೆ ನೆರವಾಗಲಿ ಎಂಬ ಕಾರಣಕ್ಕೆ ಇದ್ದರೂ, ಕೆಲವೊಮ್ಮೆ ದುರುಪಯೋಗವಾಗಿಬಿಡುತ್ತವೆ. ವರದಕ್ಷಿಣೆ ಕಿರುಕುಳ ಸೇರಿದಂತೆ ಹಲವು ಪ್ರಕರಣಗಳನ್ನು ಕೆಲವೊಮ್ಮೆ ದುರುಪಯೋಗಪಡಿಸಿಕೊಂಡಿರುವ ಉದಾಹರಣೆಗಳಿವೆ.

ಹರಿಯಾಣದ ವೀರೇಂದರ್ ಎಂಬ ಯುವಕನ ಜೊತೆಗೆ ಹೀಗೆ ಸಲುಗೆಯಿಂದಲೇ ಇದ್ದ ಯುವತಿ ಇಷ್ಟಪಟ್ಟು ಜೊತೆಗೆ ಸೇರಿದ್ದಳು. ಆದರೆ, ವಿರಸ ಉಂಟಾಗಿದ್ದರಿಂದ ಅತ್ಯಾಚಾರದ ದೂರು ದಾಖಲಿಸಿದ್ದಳು. ಈ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಯುವಕನನ್ನು ಬಂಧಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದು, ಈ ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ಉಚ್ಛ ನ್ಯಾಯಾಲಯ ಆರೋಪಿತ ಯುವಕನನ್ನು ದೋಷಮುಕ್ತಗೊಳಿಸಿದೆ. ಯುವತಿ ಮೊದಲೇ ಯುವಕನ ಜೊತೆಗೆ ಸಲುಗೆಯಿಂದ ಇದ್ದಳು. ಅಲ್ಲದೇ, ಇಬ್ಬರ ನಡುವೆ ಮೊಬೈಲ್ ಫೋನ್ ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್ ಹರಿದಾಡಿವೆ.

ಈ ಮೆಸೇಜ್ ಗಳನ್ನು ಗಮನಿಸಿದಾಗ ಇಬ್ಬರೂ ಪರಸ್ಪರ ಸಮ್ಮತಿ ಮೇರೆಗೆ ವಯೋಸಹಜ ಆಸೆ, ಆಕಾಂಕ್ಷೆಯಿಂದ ಒಂದಾಗಿದ್ದಾರೆ ಎಂಬುದು ತಿಳಿಯುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಯುವತಿಯೇ ಯುವಕನ ಜೊತೆಗೆ ಸೇರಲು ಹೆಚ್ಚು ಆಸಕ್ತಿ ವಹಿಸಿರುವುದಕ್ಕೆ ಕಾಂಡೋಮ್ ಬಗ್ಗೆ ನಡೆದಿರುವ ಚರ್ಚೆಯೇ ಸಾಕ್ಷಿಯಾಗುವಂತಿದೆ. ಇದನ್ನೆಲ್ಲಾ ಪರಿಗಣಿಸಿ ಆರೋಪಿತ ಯುವಕನನ್ನು ಕೋರ್ಟ್ ಬಿಡುಗಡೆ ಮಾಡಲು ಆದೇಶಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...