alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ಹಗಲಿನಲ್ಲಿ ಪ್ರಸಾರವಾಗಲ್ಲ ಕಾಂಡೋಮ್ ಜಾಹೀರಾತು

ಭಾರತದ ಜಾಹೀರಾತು ಮಾನದಂಡ ಸಮಿತಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಶೀಘ್ರದಲ್ಲಿಯೇ ಕಾಂಡೋಮ್ ಜಾಹೀರಾತು ಪ್ರಚಾರಕ್ಕೆ ಸಮಯ ನಿಗದಿಯಾಗಲಿದೆ. ಮಕ್ಕಳಿಂದ ಹಿಡಿದು ಕುಟುಂಬಸ್ಥರೆಲ್ಲ ಒಟ್ಟಿಗೆ ಕುಳಿತು ಟಿವಿ ನೋಡುವಾಗ ಈ ಜಾಹೀರಾತು ಪ್ರಸಾರವಾದ್ರೆ ಮುಜುಗರದ ಜೊತೆ ಮಕ್ಕಳ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ಹಾಗಾಗಿ ರಾತ್ರಿ ಮಾತ್ರ ಕಾಂಡೋಮ್ ಜಾಹೀರಾತು ಪ್ರಚಾರಕ್ಕೆ ಸಮಿತಿ ಮುಂದಾಗಿದೆ.

ಸನ್ನಿ ಲಿಯೋನ್ ಕಾಂಡೋಮ್ ಜಾಹೀರಾತಿನ ವಿರುದ್ಧ ದೂರು ದಾಖಲಾಗಿತ್ತು. ಈ ದೂರಿನ ನಂತ್ರ ಎಎಸ್ಸಿಐ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇಂಡಿಯಾ ಟೈಮ್ಸ್ ವರದಿ ಪ್ರಕಾರ ಇನ್ಮುಂದೆ ಬೆಳಿಗ್ಗೆ ಕಾಂಡೋಮ್ ಜಾಹೀರಾತು ಪ್ರಸಾರವಾಗೋದಿಲ್ಲ. ರಾತ್ರಿ 10 ಗಂಟೆ ನಂತ್ರ ಹಾಗೂ ಬೆಳಿಗ್ಗೆ 6 ಗಂಟೆಯೊಳಗೆ ಮಾತ್ರ ಕಾಂಡೋಮ್ ಜಾಹೀರಾತು ಪ್ರಸಾರವಾಗಲಿದೆ.

ಕಾಂಡೋಮ್ ಜಾಹೀರಾತಿನ ವಿರುದ್ಧ ದೂರು ದಾಖಲಾಗಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಅನೇಕ ದೂರು ದಾಖಲಾಗಿದೆ. ಈ ಎಲ್ಲ ದೂರುಗಳನ್ನು ಪರಿಶೀಲನೆ ನಡೆಸಿರುವ ಎಎಸ್ಸಿಐ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಪತ್ರ ಬರೆದಿದೆ. ಎಲ್ಲ ಮಾಧ್ಯಮಗಳಿಗೆ ಕಾಂಡೋಮ್ ಜಾಹೀರಾತನ್ನು ರಾತ್ರಿ 10ರಿಂದ ಬೆಳಿಗ್ಗೆ 6ರೊಳಗೆ ಪ್ರಸಾರ ಮಾಡುವಂತೆ ಸೂಚನೆ ನೀಡಬೇಕೆಂದು ಪತ್ರದಲ್ಲಿ ವಿನಂತಿಸಿಕೊಂಡಿದೆ.

ಕೆಲ ದಿನಗಳ ಹಿಂದಷ್ಟೇ ಸಲ್ಮಾನ್ ಖಾನ್ ಕೂಡ ಕಾಂಡೋಮ್ ಜಾಹೀರಾತಿಗೆ ವಿರೋಧ ವ್ಯಕ್ತಪಡಿಸಿದ್ದರು. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಈ ಜಾಹೀರಾತನ್ನು ಪ್ರಸಾರ ಮಾಡಬೇಡಿ ಎಂದು ಕಲರ್ಸ್ ಗೆ ಸೂಚಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...