alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಡೋಮ್ ಜಾಹೀರಾತಿನ ಬಗ್ಗೆ ಕೇಂದ್ರಕ್ಕೆ ಕೋರ್ಟ್ ಪ್ರಶ್ನೆ

ಹಗಲಿನಲ್ಲಿ ಕಾಂಡೋಮ್ ಜಾಹೀರಾತು ನಿಷೇಧ ವಿಚಾರಕ್ಕೆ ಸಂಬಂದಿಸಿದಂತೆ ಕೇಂದ್ರ ಸರ್ಕಾರವನ್ನು ಕೋರ್ಟ್ ಪ್ರಶ್ನೆ ಮಾಡಿದೆ. ಕಾಂಡೋಮ್ ಜಾಹೀರಾತನ್ನು ಹಗಲಿನಲ್ಲಿ ಯಾಕೆ ನೋಡಬಾರದು ಎಂದು ರಾಜಸ್ತಾನ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಮಾಡಿದೆ.

ಈ ಬಗ್ಗೆ ಸಲ್ಲಿಸಲಾಗಿದ್ದ ಅರ್ಜಿಯೊಂದರ ವಿಚಾರಣೆ ನಡೆಸಿದ ಕೋರ್ಟ್, ಉತ್ತರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಡಿಸೆಂಬರ್ 11ರಂದು ಮಾಹಿತಿ ಮತ್ತು ಪ್ರಸಾರ ಇಲಾಖೆ ಕಾಂಡೋಮ್ ಜಾಹೀರಾತಿನ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಕಾಂಡೋಮ್ ಜಾಹೀರಾತು ಪ್ರಸಾರ ಮಾಡದಂತೆ ಎಲ್ಲ ಮಾಧ್ಯಮಗಳಿಗೆ ಸೂಚನೆ ನೀಡಿದೆ.

ಈ ಸಂಬಂಧ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಂತ್ರ ರಾಜಸ್ತಾನ ಹೈಕೋರ್ಟ್ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೇರಿದಂತೆ ಕೇಂದ್ರ ಸರ್ಕಾರದ ಕಾರ್ಯದರ್ಶಿ ಮತ್ತು ಕೇಂದ್ರ ಆರೋಗ್ಯ ಕಾರ್ಯದರ್ಶಿಗೆ ನೊಟೀಸ್ ಜಾರಿಮಾಡಿದೆ. ಮಾನವ ಹಕ್ಕುಗಳ ಗ್ಲೋಬಲ್ ಅಲೈಯನ್ಸ್, ಜನರಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಕಾಂಡೋಮ್ ಜಾಹೀರಾತನ್ನು ಹಗಲಿನಲ್ಲಿ ಪ್ರದರ್ಶನ ಮಾಡಿದ್ರೆ ಏನು ಸಮಸ್ಯೆ. ರಾತ್ರಿ ಜಾಹೀರಾತನ್ನು ಯಾರು ನೋಡ್ತಾರೆಂದು ಅರ್ಜಿಯಲ್ಲಿ ಕೇಳಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...