alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಲತಾಣದಲ್ಲಿ ವೈರಲ್ ಆಯ್ತು ವಿದ್ಯಾರ್ಥಿನಿಯ ಸಾಂಗ್

campus song

ತಿರುವನಂತಪುರಂ: ಸುಖಾಸುಮ್ಮನೆ ಹಾಡಿದ ಹಾಡುಗಳು ಕೆಲವೊಮ್ಮೆ ಸಂಚಲನ ಮೂಡಿಸುವಷ್ಟು ಹಿಟ್ ಆಗುತ್ತವೆ. ಚಿತ್ರಗೀತೆ ಆಗಿರಬಹುದು, ಸಾಮಾನ್ಯರ ಹಾಡಾಗಿರಬಹುದು, ಕೆಲವೊಮ್ಮೆ ಹೆಚ್ಚು ಜನರನ್ನು ತಲುಪುತ್ತವೆ. ಅಂತಹ ಒಂದು ಹಾಡಿನ ಕುರಿತಾದ ವರದಿಯೊಂದು ಇಲ್ಲಿದೆ ನೋಡಿ.

ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಹಾಡಿರುವ ಈ ಸಾಂಗ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸುಮಾರು 1.80 ಲಕ್ಷ ಮಂದಿ ವೀಕ್ಷಿಸಿದ್ದಾರೆ. ತಲಶೇರಿ ಬ್ರೆನ್ನೆನ್ ಕಾಲೇಜಿನ ಸ್ಯಾಮ್ ಮ್ಯಾಥ್ಯೂ ಅವರಿಗೆ ರಾಜಕೀಯದಲ್ಲಿ ಹೆಚ್ಚಿನ ಆಸಕ್ತಿ. ಅವರು ರಾಜಕೀಯ ಹಾಗೂ ವಿದ್ಯಾರ್ಥಿನಿಯ ಜೀವನ ಕುರಿತಾದ ಕವಿತೆಯೊಂದನ್ನು ರಚಿಸಿದ್ದಾರೆ. ವಿದ್ಯಾರ್ಥಿನಿ, ಕಾಮ್ರೇಡ್ ಮೇಲೆ ಒಲವು ಬೆಳೆಸಿಕೊಂಡು ತನ್ನ ಪ್ರೀತಿಯನ್ನು ಅಭಿವ್ಯಕ್ತಪಡಿಸುವ ಭಾವನೆ ಇದರಲ್ಲಿದೆ.

ಸಖಾವು(ಕಾಮ್ರೇಡ್) ಹೆಸರಿನ ಈ ಸಾಹಿತ್ಯ ರಚನೆಗೆ ಕಾಲೇಜಿನ ವಿದ್ಯಾರ್ಥಿನಿ ಸಂಘದ ಉಪಾಧ್ಯಕ್ಷೆ ಆರ್ಯಾ ದಯಾಳ್ ರಾಗ ಸಂಯೋಜನೆ ಮಾಡಿ, ತಮ್ಮದೇ ಕಂಠದಲ್ಲಿ ಹಾಡಿದ್ದು, ಅದನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನು ಸುಮಾರು 1.80 ಲಕ್ಷ ಮಂದಿ ವೀಕ್ಷಿಸಿದ್ದು, ಸಚಿವ ಥಾಮಸ್ ಐಸಾಕ್ ಸೇರಿದಂತೆ ಸುಮಾರು 2,300ಕ್ಕೂ ಅಧಿಕ ಮಂದಿ ಈ ಕ್ಯಾಂಪಸ್ ಸಾಂಗ್ ಅನ್ನು ಶೇರ್ ಮಾಡಿದ್ದಾರೆ. ಸಖಾವು ಹೆಸರಿನ ಈ ಸಾಂಗ್ ಕೇರಳದಾದ್ಯಂತ ಸುದ್ದಿಯಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...