alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ಕಂಪ್ಯೂಟರ್ ನಲ್ಲಿ ನಡೆಯಲಿದೆ ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆ

trump-10_794i0l3

ಚಾಲನಾ ಪರವಾನಿಗೆಯಲ್ಲಿ ನಡೆಯುವ ವಂಚನೆ ತಪ್ಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಚಾಲನಾ ಪರವಾನಿಗೆಯನ್ನು ಕಂಪ್ಯೂಟರ್ ಮೂಲಕ ನೀಡಲು ಮುಂದಾಗಿದೆ. ಇನ್ಮುಂದೆ ಕಂಪ್ಯೂಟರ್ ಮೂಲಕ ಚಾಲನಾ ಪರವಾನಿಗೆ ನೀಡುವುದಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಭೋಪಾಲ್ ನ ಮುಖ್ಯಮಂತ್ರಿ ಮನೆಯಲ್ಲಿ ಮಾತನಾಡಿದ ಗಡ್ಕರಿ ಈ ವಿಷಯ ತಿಳಿಸಿದ್ದಾರೆ. ಚಾಲನಾ ಪರವಾನಿಗೆಯಲ್ಲಾಗುವ ವಂಚನೆಯನ್ನು ತಪ್ಪಿಸುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗಡ್ಕರಿ ತಿಳಿಸಿದ್ದಾರೆ. ಕಂಪ್ಯೂಟರ್ ಪರೀಕ್ಷೆ ಪಾಸ್ ಆದವರಿಗೆ ಮೂರು ದಿನದಲ್ಲಿ ಲೈಸೆನ್ಸ್ ಸಿಗಲಿದೆ ಎಂದವರು ಹೇಳಿದ್ದಾರೆ.

ಲೈಸೆನ್ಸ್ ವಿಚಾರದಲ್ಲಿ ಮೋಸವಾಗ್ತಿದೆ. ಶೇಕಡಾ 30ರಷ್ಟು ನಕಲಿ ಪರವಾನಿಗೆ ನೀಡಲಾಗ್ತಾ ಇದೆ. ಇದನ್ನು ತಪ್ಪಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದ್ದು ದೇಶದ 18 ಕಡೆ ಅತ್ಯಾಧುನಿಕ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಗಡ್ಕರಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...