alex Certify
ಕನ್ನಡ ದುನಿಯಾ       Mobile App
       

Kannada Duniya

ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ದೂರು ದಾಖಲು

ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದಂತೆ ಬಿಹಾರದ ಸೀತಾಮರ್ಹಿ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ‌.

ಕೆಲ ದಿನಗಳ ಹಿಂದೆ ಇರಾನಿ‌ ಅವರು, ಶಬರಿಮಲೆ ಬೆಟ್ಟಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಮಾತನಾಡುವಾಗ, ಋತುಚಕ್ರದ ಬಗ್ಗೆ ಪ್ರಸ್ತಾಪಿಸಿ‌ ಮಹಿಳೆಯರಿಗೆ ಪ್ರಾರ್ಥನೆ ಮಾಡುವ ಹಕ್ಕಿದೆ. ಆದರೆ ದೇವಸ್ಥಾನವನ್ನು ಅಪವಿತ್ರಗೊಳಿಸುವ ಹಕ್ಕಿಲ್ಲ ಎನ್ನುವ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಈ ಹಿನ್ನಲೆಯಲ್ಲಿ ಸೀತಾಮರ್ಹಿ ನ್ಯಾಯಾಲಯದಲ್ಲಿ ಸರೋಜ್ ಕುಮಾರಿ ಎನ್ನುವವರು ದೂರು ದಾಖಲಿಸಿದ್ದಾರೆ.

ಹೇಳಿಕೆ ನೀಡಿದ ಎರಡು ಗಂಟೆ ಬಳಿಕ, ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಇರಾನಿ‌ ಅವರು ಟ್ವೀಟ್ ಮಾಡಿ, ತಮ್ಮ ಹೇಳಿಕೆ ಕುರಿತು ಸಮಜಾಯಿಷಿ ನೀಡಿದ್ದರೂ ಇದೀಗ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.

ಅ.29ರಂದು ಇರಾನಿ ವಿರುದ್ಧದ ಪ್ರಕರಣ ವಿಚಾರಣೆಗೆ ಬರಲಿದ್ದು, ಮಹಿಳೆಯರ ಭಾವನೆಗೆ ಧಕ್ಕೆ, ರಾಜದ್ರೋಹದಂತ ಗಂಭೀರ ಆರೋಪಗಳು ಸೇರಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...