alex Certify
ಕನ್ನಡ ದುನಿಯಾ       Mobile App
       

Kannada Duniya

Combiflam ಸ್ಯಾಪಲ್ ಫೇಲ್– ಮಾತ್ರೆ ವಾಪಸ್ ಪಡೆಯುತ್ತಿದೆ ಕಂಪನಿ

combiflam

ನೀವು ನೋವು ನಿವಾರಕ ಮಾತ್ರೆ Combiflam ಸೇವಿಸ್ತಾ ಇದ್ದರೆ ಎಚ್ಚರ. ಯಾವ ಸಮಯದಲ್ಲಿ ಮಾತ್ರೆಯನ್ನು ಉತ್ಪಾದಿಸಲಾಗಿದೆ ಎಂಬುದನ್ನು ನೋಡಿ ಖರೀದಿ ಮಾಡಿ. ಯಾಕೆಂದ್ರೆ ಫ್ರೆಂಚ್ ಬಹುರಾಷ್ಟ್ರೀಯ ಔಷಧಿ ಕಂಪನಿ ಸನೋಫಿ ತನ್ನಉತ್ಪನ್ನ Combiflam ನ ಕೆಲವು ಬ್ಯಾಚ್ ಮಾತ್ರೆಗಳನ್ನು ಭಾರತ ಮಾರುಕಟ್ಟೆಯಿಂದ ವಾಪಸ್ ಪಡೆಯುವ ನಿರ್ಧಾರಕ್ಕೆ ಬಂದಿದೆ. ಸನೋಫಿ ಸಂಸ್ಥೆಯ ಸ್ಥಳೀಯ ಘಟಕ ಇದರ ಬಗ್ಗೆ ಮಾಹಿತಿ ನೀಡಿದೆ. ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ನಿಯಂತ್ರಣ ಸಂಸ್ಥೆ ಕೆಲ ದಿನಗಳ ಹಿಂದಷ್ಟೇ Combiflam ಮಾತ್ರೆಯ ಗುಣಮಟ್ಟ ಕೆಳದರ್ಜೆಯದ್ದಾಗಿದೆ ಎಂದು ವರದಿ ನೀಡಿತ್ತು.

ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ನಿಯಂತ್ರಣ ಸಂಸ್ಥೆ, ಕೆಲ ಬ್ಯಾಚ್ ನ Combiflam ಮಾತ್ರೆಗಳ ಗುಣಮಟ್ಟ ಸರಿಯಿಲ್ಲ ಎಂದು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿತ್ತು. ಜೂನ್ 2015 ಮತ್ತು ಜುಲೈ 2015ರಲ್ಲಿ ತಯಾರಿಸಿದ ಮಾತ್ರೆಗಳ ಗುಣಮಟ್ಟ ಸರಿಯಿಲ್ಲ ಎಂದು ಸಂಸ್ಥೆ ಹೇಳಿತ್ತು.

ಇದಕ್ಕೆ ಸನೋಫಿ ವಕ್ತಾರರು ಮೇಲ್ ಮೂಲಕ ಉತ್ತರ ನೀಡಿದ್ದಾರೆ. ಕಂಪನಿ ಉತ್ಪನ್ನವನ್ನು ಸಮರ್ಥಿಸಿಕೊಂಡಿರುವ ಅವರು, ಭಾರತ ಮಾರುಕಟ್ಟೆಯಿಂದ ಜೂನ್ ಮತ್ತು ಜುಲೈ 2015ರಲ್ಲಿ ಉತ್ಪನ್ನವಾದ ಮಾತ್ರೆಗಳನ್ನು ವಾಪಸ್ ಪಡೆಯುತ್ತಿರುವುದಾಗಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...