alex Certify
ಕನ್ನಡ ದುನಿಯಾ       Mobile App
       

Kannada Duniya

ಲಂಡನ್ ನಲ್ಲೂ ನಗೆಪಾಟಲಿಗೀಡಾದ ವಿವಾದಾತ್ಮಕ ಶಾಸಕ

pc_george-eps_2

ಕೇರಳದ ವಿವಾದಾತ್ಮಕ ರಾಜಕಾರಣಿ ಪಿ.ಸಿ.ಜಾರ್ಜ್ ಅವರ ಲಂಡನ್ ಭೇಟಿ ತಮಾಷೆಯ ವಿಷಯವಾಗ್ಬಿಟ್ಟಿದೆ. ಸಣ್ಣ ವಿಧಾನಸಭಾ ಕ್ಷೇರ್ ಪುಂಜಾರುವಿನಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಾರ್ಜ್ ಚುನಾವಣೆಯಲ್ಲಿ ಗೆದ್ದು ಬಂದಿದ್ದೇ ಒಂದು ಅಚ್ಚರಿ.

5 ತಿಂಗಳ ಬಳಿಕ ತಮ್ಮದೇ ಆದ ಜನಪಕ್ಷಂ ಅನ್ನು ಲಾಂಚ್ ಮಾಡಲು ಲಂಡನ್ ಗೆ ತೆರಳಿದ್ರು. ಅಲ್ಲಿನ ಕೇರಳಿಗರನ್ನು ಭೇಟಿಯಾಗುವುದು ಅವರ ಉದ್ದೇಶ. ಅವರು ಲಂಡನ್ ನಲ್ಲಿಳಿದಾಗಿನಿಂದ್ಲೇ ತಮಾಷೆ ಶುರುವಾಗಿತ್ತು, ಅವರಿಗಾಗಿ ಕಾಯುತ್ತಿದ್ದ ಕಾರಿಗೆ ಪೂಂಜಾರ್ ಎಂಎಲ್ಎ ಪಿಸಿ ಜಾರ್ಜ್ ಅಂತಾ ಬರೆದು ಕಾಗದವೊಂದನ್ನು ಅಂಟಿಸಲಾಗಿತ್ತು.

ಟಿವಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಯಾರನ್ನೋ ಇನ್ಯಾರೋ ಎಂದುಕೊಂಡು ಜಾರ್ಜ್ ಮತ್ತೊಂದು ಯಡವಟ್ಟು ಮಾಡಿದ್ರು. ಎಂ.ಕೆ.ಕುರುವಿಲ್ಲಾ ಅವರನ್ನು ಥಾಮಸ್ ಕುರುವಿಲ್ಲಾ ಅಂತಾ ತಪ್ಪಾಗಿ ತಿಳಿದುಕೊಂಡ ಜಾರ್ಜ್, ಮಲಯಾಳಂನಲ್ಲೇ ವಾಗ್ವಾದಕ್ಕಿಳಿದ್ರು. ಅವರನ್ನು ಸಮಾಧಾನಪಡಿಸಲು ನಿರೂಪಕರು ಹರಸಾಹಸಪಡಬೇಕಾಯ್ತು.

ಕೋಹಿನೂರ್ ಅನ್ನು ವಾಪಸ್ ತರುವ ಬಗ್ಗೆ ಜಾರ್ಜ್ ಮಾಡಿದ ಭಾಷಣ ಕೇಳಿ ಲಂಡನ್ ರಾಣಿ ಹಾಗೂ ರಾಜಕುಮಾರ ದೇಶ ಬಿಟ್ಟು ದೂರ ಹೋಗೋಣ ಎಂದುಕೊಂಡಿದ್ರೂ ಆಶ್ಚರ್ಯವಿಲ್ಲ. ಮಾಧ್ಯಮಗಳಲ್ಲಿ ನಡೆಯೋ ಚರ್ಚಾ ಕಾರ್ಯಕ್ರಮಗಳಲ್ಲಿ ನಾಲಗೆ ಹರಿಬಿಡುವ ಜಾರ್ಜ್, ಕೇರಳದ ವಿವಾದಾತ್ಮಕ ಶಾಸಕ ಎಂಬ ಹಣೆಪಟ್ಟಿ ಹೊತ್ತುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...