alex Certify
ಕನ್ನಡ ದುನಿಯಾ       Mobile App
       

Kannada Duniya

ಅಪಹರಿಸಿ 400 ಅಡಿ ಕೆಳಗೆ ಎಸೆದ್ರೂ ಬದುಕಿ ಬಂದ ವಿದ್ಯಾರ್ಥಿ..!

ಇಂಧೋರ್ ನ ಪರದೇಸಿಪುರದಲ್ಲಿ ವೈದ್ಯರೇ ಆಶ್ಚರ್ಯಗೊಳ್ಳುವಂತ ಘಟನೆ ನಡೆದಿದೆ. 400 ಅಡಿ ಕೆಳಗೆ ಬಿದ್ದಿದ್ದ ಅಪಹರಣಕ್ಕೊಳಗಾದ ವಿದ್ಯಾರ್ಥಿಯೊಬ್ಬ 5 ದಿನಗಳ ನಂತ್ರ ಬದುಕಿ ಬಂದಿದ್ದಾನೆ. ಆತನ ಸುಳಿವು ಹಿಡಿದು ಹೊರಟ ಪೊಲೀಸರು ಹಾಗೂ ಸ್ಥಳೀಯರಿಗೆ ಬಿಎಸ್ ಸಿ ಓದುತ್ತಿರುವ 21 ವರ್ಷದ ಮೃದುಲ್ ಸಿಕ್ಕಿದ್ದಾನೆ.

ಜನವರಿ 7ರಂದು ರಾಜು ಎಂಬಾತ ತನ್ನ ಮೂವರು ಸ್ನೇಹಿತರ ಜೊತೆ ಮೃದುಲ್ ನನ್ನು ಹೊರಗೆ ಕರೆದೊಯ್ದಿದ್ದ. ಮೃದುಲ್ ರಾಜು ಪ್ರೇಯಸಿ ಜೊತೆ ಮಾತನಾಡ್ತಾನೆ ಎಂಬ ಶಂಕೆ ಮೇರೆಗೆ ಆತನಿಗೆ ಹೊಡೆದು ಕೈ ಕಾಲು ಕಟ್ಟಿ 400 ಅಡಿ ಎತ್ತರದಿಂದ ಕೆಳಗೆ ಎಸೆದಿದ್ದಾರೆ. ನಂತ್ರ ಕಲ್ಲುಗಳನ್ನು ಎಸೆದಿದ್ದಾರೆ.

ಮೃದುಲ್ ಕಾಡಿನ ಮಧ್ಯೆ ಹರಿಯುವ ಸಣ್ಣ ಜಲಪಾತದ ಬಳಿ ಬಿದ್ದಿದ್ದಾನೆ. ಇದ್ರಿಂದಾಗಿ ಹೊಡೆತ ತಿಂದು ಗಾಯವಾದ್ರೂ ರಕ್ತ ಹೆಚ್ಚು ಸೋರಿಲ್ಲ. ಸೋಂಕು ಕೂಡ ಆಗಿಲ್ಲ. ಕೈ, ಕಾಲಿಗೆ ಗಾಯವಾಗಿದ್ದು ಬಿಟ್ಟರೆ ಆತನ ಹೃದಯ, ಮೆದುಳು, ಕಿಡ್ನಿ ಯಾವುದಕ್ಕೂ ಹಾನಿಯಾಗಿಲ್ಲ.

ಆತನ ಬಟ್ಟೆ ನೋಡಿದ ಸ್ಥಳೀಯರು ಕಾಡಿನಲ್ಲಿ ಮೃದುಲ್ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮೃದುಲ್ ಸ್ಥಳೀಯರ ಕಣ್ಣಿಗೆ ಬಿದ್ದಿದ್ದು, ಉಸಿರಾಡುತ್ತಿದ್ದಾನೆಂಬ ವಿಷ್ಯ ಗೊತ್ತಾಗಿದೆ. ತಕ್ಷಣ ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಲಾಗಿದೆ. 5 ದಿನಗಳಾದ್ರೂ ಬದುಕಿದ್ದ ಮೃದುಲ್ ನೋಡಿ ವೈದ್ಯರೇ ಆಶ್ಚರ್ಯಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...