alex Certify
ಕನ್ನಡ ದುನಿಯಾ       Mobile App
       

Kannada Duniya

ಹಿಮಾಚಲ ಪ್ರದೇಶದಲ್ಲಿ ಭಾರೀ ಚಳಿಗೆ ಜನಜೀವನ ಅಸ್ತವ್ಯಸ್ತ

cold-waves-in-himachal_1484146072

ಹಿಮಪಾತದ ನಂತ್ರ ಮೈಕೊರೆಯುವ ಚಳಿಗೆ ಹಿಮಾಚಲ ಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಭೂಮಿ ಸಂಪೂರ್ಣವಾಗಿ ಹಿಮದಿಂದ ಆವೃತವಾಗಿದೆ. ರಾಜಧಾನಿ ಶಿಮ್ಲಾದಲ್ಲಿ ಅನೇಕ ವರ್ಷಗಳ ನಂತ್ರ ದಾಖಲೆ ಪ್ರಮಾಣದ ಚಳಿ ಕಾಣಿಸಿಕೊಂಡಿದೆ.

ಶಿಮ್ಲಾದಲ್ಲಿ -3.2 ಡಿಗ್ರಿ ತಾಪಮಾನವಿದ್ದು, ನದಿ, ಸರೋವರಗಳು ಫ್ರಿಜ್ ನಂತಾಗಿವೆ. ಶಿಮ್ಲಾ ಸೇರಿದಂತೆ ಅನೇಕ ನಗರಗಳಿಗೆ ಐದು ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ನೀರು ಗಟ್ಟಿಯಾಗಿರುವುದರಿಂದ ಕುಡಿಯಲು ಸರಿಯಾಗಿ ನೀರು ಸಿಗ್ತಾ ಇಲ್ಲ. 200ಕ್ಕೂ ಹೆಚ್ಚು ರಸ್ತೆ ಮಾರ್ಗಗಳು ಬಂದ್ ಆಗಿವೆ. ಮೇಲಿನ ಶಿಮ್ಲಾ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಅಲ್ಲಿ ಅನೇಕ ಜನರು ತೊಂದರೆಗೆ ಸಿಲುಕಿದ್ದಾರೆ. ರಸ್ತೆಗಳು ಗ್ಲಾಸ್ ನಂತಾಗಿದ್ದು, ರಸ್ತೆ ಮೇಲೆ ನಡೆದಾಡುವುದೂ ಕಷ್ಟವಾಗಿದೆ. ಯಾವುದು ರಸ್ತೆ ಎಂಬುದೇ ಸರಿಯಾಗಿ ತಿಳಿಯುತ್ತಿಲ್ಲ. ಎನ್ ಹೆಚ್ 5 ಸಂಚಾರ ಬಂದ್ ಆಗಿರುವುದರಿಂದ 150ಕ್ಕೂ ಹೆಚ್ಚು ಮಾರ್ಗಗಳ ಸಂಚಾರ ಸಾಧ್ಯವಾಗ್ತಾ ಇಲ್ಲ.

 

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...