alex Certify
ಕನ್ನಡ ದುನಿಯಾ       Mobile App
       

Kannada Duniya

ದೇವಸ್ಥಾನಕ್ಕೆ ತಲೆನೋವಾಗಿದೆ ನಾಣ್ಯಗಳು..!

ಮಥುರಾದ ಶ್ರೀಕೃಷ್ಣ ಜನ್ಮಭೂಮಿ ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರ್ತಾರೆ. ಭಕ್ತರ ನಿಯಂತ್ರಿಸಲು ಹರಸಾಹಸಪಡ್ತಿದ್ದ ದೇವಸ್ಥಾನದ ಆಡಳಿತ ಮಂಡಳಿಗೆ ಈಗ ಇನ್ನೊಂದು ತಲೆನೋವು ಶುರುವಾಗಿದೆ. ದೇವಸ್ಥಾನಕ್ಕೆ ಭಕ್ತರು ನೀಡುವ ಕಾಣಿಕೆ ಅವ್ರ ನಿದ್ರೆಗೆಡಿಸಿದೆ.

ದೇವಸ್ಥಾನಕ್ಕೆ ಬರುವ ಭಕ್ತರು ನಾಣ್ಯಗಳನ್ನು ಕಾಣಿಕೆ ಹುಂಡಿಗೆ ಹಾಕ್ತಾರೆ. ಅಪಾರ ಪ್ರಮಾಣದಲ್ಲಿ ನಾಣ್ಯಗಳು ಸಂಗ್ರಹವಾಗಿವೆ. ಇದನ್ನು ಸ್ವೀಕರಿಸಲು ಬ್ಯಾಂಕ್ ನಿರಾಕರಿಸಿದೆ. ಹಾಗಾಗಿ ಈ ನಾಣ್ಯಗಳನ್ನು ಎಲ್ಲಿ ಮತ್ತು ಹೇಗೆ ಸುರಕ್ಷಿತವಾಗಿಡಬೇಕೆಂಬ ಚಿಂತೆ ಆಡಳಿತ ಮಂಡಳಿಯನ್ನು ಕಾಡ್ತಿದೆ.

ಮಾಹಿತಿ ಪ್ರಕಾರ ಶ್ರೀ ಕೃಷ್ಣ ಜನ್ಮಭೂಮಿ ದೇವಸ್ಥಾನವೊಂದರಲ್ಲಿಯೇ 30 ಲಕ್ಷಕ್ಕೂ ಹೆಚ್ಚು ನಾಣ್ಯಗಳು ಕಾಣಿಕೆ ರೂಪದಲ್ಲಿ ಬಂದಿವೆ. ದ್ವಾರಕಾದೀಶ ದೇವಸ್ಥಾನದಲ್ಲಿ 7 ಲಕ್ಷಕ್ಕೂ ಹೆಚ್ಚು ನಾಣ್ಯಗಳು ಸಂಗ್ರಹವಾಗಿವೆಯಂತೆ. ನೋಟು ನಿಷೇಧಕ್ಕಿಂತ ಮೊದಲು ಭಕ್ತರು ನೋಟುಗಳನ್ನು ಕಾಣಿಕೆ ರೂಪದಲ್ಲಿ ನೀಡುತ್ತಿದ್ದಂತೆ. ಆದ್ರೀಗ ನಾಣ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹಾಕ್ತಿದ್ದಾರೆ.

ಎಲ್ಲ ಬ್ಯಾಂಕ್ ಗಳೂ ನಾಣ್ಯಗಳನ್ನು ತೆಗೆದುಕೊಳ್ಳುತ್ತವೆ. ಆದ್ರೆ ಇಷ್ಟು ದೊಡ್ಡ ಪ್ರಮಾಣ ನಾಣ್ಯಗಳನ್ನು ಬ್ಯಾಂಕ್ ನ ಸಣ್ಣ ಶಾಖೆಗಳು ತೆಗೆದುಕೊಂಡಲ್ಲಿ ನಾಣ್ಯ ಸಂಗ್ರಹ ಕಷ್ಟವಾಗುತ್ತದೆ. ಹಾಗಾಗಿ ದೊಡ್ಡ ಶಾಖೆಗೆ ನೀಡಿ ಎನ್ನುತ್ತಿದೆ ಸ್ಥಳೀಯ ಬ್ಯಾಂಕ್ ಶಾಖೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...