alex Certify
ಕನ್ನಡ ದುನಿಯಾ       Mobile App
       

Kannada Duniya

ಬೋಂಡಾ ವ್ಯಾಪಾರಿಗೆ ಫೇಸ್ಬುಕ್ ನಿಂದ ಸಿಕ್ಕಿದೆ ನೆರವು

vada

ಖಾಯಿಲೆಗಳು ಹೇಳಿ ಕೇಳಿ ಬರೋದಿಲ್ಲ. ಬಡವರಿಗೇನಾದ್ರೂ ರೋಗ ಬಂದ್ರೆ ಚಿಕಿತ್ಸೆಗೆ ಹಣವಿಲ್ಲದೇ ಒದ್ದಾಡ್ತಾರೆ. ತಮಿಳುನಾಡಿನಲ್ಲಿ ಕೀಮಾ ವಡೆ ಮಾರಿ ಬದುಕ್ತಾ ಇದ್ದ ಜಾವೇದ್ ಖಾನ್ ಕೂಡ ಅಂಥದ್ದೇ ದಯನೀಯ ಸ್ಥಿತಿಯಲ್ಲಿದ್ದ. ಆದ್ರೆ ಫೇಸ್ಬುಕ್ ಮೂಲಕ ಆತನ ಚಿಕಿತ್ಸೆಗೆ 1.5 ಲಕ್ಷ ರೂಪಾಯಿ ಸಂಗ್ರಹವಾಗಿದೆ.

50 ವರ್ಷದ ಜಾವೇದ್ ಗೆ ಸಕ್ಕರೆ ಖಾಯಿಲೆ ಇದೆ. ಅದು ಉಲ್ಬಣಿಸಿದ್ದರಿಂದ ಜಾವೇದ್ ಕಾಲುಗಳನ್ನೇ ಕಳೆದುಕೊಳ್ಳಬೇಕಾಯ್ತು. ಆಪರೇಷನ್ ಗೆ ಹಣವಿಲ್ಲ, ಮುಂದೇನು ಅನ್ನೋ ಆತಂಕ ಅವರನ್ನು ಕಾಡುತ್ತಿತ್ತು. ನಿತ್ಯ ವಡೆ ತಿನ್ನಲು ಜಾವೇದ್ ಅಂಗಡಿಗೆ ಬರ್ತಿದ್ದ ಅರವಿಂದ್ ಎಂಬಾತ ಅವರ ಸಮಸ್ಯೆಯನ್ನು ಕೇಳಿದ್ದ.

ಕೊನೆಗೆ ಜಾವೇದ್ ಖಾನ್ ರ ಕರುಣಾಜನಕ ಕಥೆಯನ್ನು ಅರವಿಂದ್ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದ. ಅದನ್ನು 4000ಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲ ಜಾವೇದ್ ಚಿಕಿತ್ಸೆಗೆ ಬೇಕಾದ 1.5 ಲಕ್ಷ ರೂಪಾಯಿ ಸಂಗ್ರಹವೂ ಆಗಿದೆ. ಫೇಸ್ಬುಕ್ ಮೂಲಕವೇ ನೆರವು ಸಿಕ್ಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...