alex Certify
ಕನ್ನಡ ದುನಿಯಾ       Mobile App
       

Kannada Duniya

ಮ್ಯಾರೇಜ್ ಸರ್ಟಿಫಿಕೇಟ್ ಇದ್ರೆ ಮಾತ್ರ ಈ ‘ಪಾರ್ಕ್’ ಗೆ ಎಂಟ್ರಿ…!

ಉದ್ಯಾನವನಗಳಲ್ಲಿ ಹೆಚ್ಚಾಗಿ ಪ್ರೇಮಿಗಳೇ ಕಾಣಸಿಗ್ತಾರೆ. ಒಮ್ಮೊಮ್ಮೆ ಸಾರ್ವಜನಿಕ ಸ್ಥಳದಲ್ಲೇ ಮೈಮರೆತು ಸರಸದಲ್ಲಿ ತೊಡಗೋದು ಉಂಟು. ಲವ್ ಬರ್ಡ್ ಗಳ ಈ ಖುಲ್ಲಂ ಖುಲ್ಲಾ ಪ್ರೀತಿಗೆ ಬ್ರೇಕ್ ಹಾಕಲು ಕೊಯಂಬತ್ತೂರಿನಲ್ಲಿ ಹೊಸ ಪ್ಲಾನ್ ಮಾಡಲಾಗಿದೆ.

ಇಲ್ಲಿ ಪಾರ್ಕ್ ಗೆ ಎಂಟ್ರಿಯಾಗಬೇಕು ಅಂದ್ರೆ ಜೋಡಿಗಳ ಬಳಿ ಮದುವೆ ಸರ್ಟಿಫಿಕೇಟ್ ಇರಬೇಕು. ಇಲ್ಲದೇ ಹೋದ್ರೆ ಉದ್ಯಾನವನಕ್ಕೆ ಪ್ರವೇಶಿಸಲು ಅವಕಾಶವಿಲ್ಲ. ತಮಿಳುನಾಡು ಕೃಷಿ ವಿವಿಗೆ ಸೇರಿದ ಪಾರ್ಕ್ ಇದು. ಉದ್ಯಾನವನವನ್ನು ಪ್ರೇಮಿಗಳು ದುರ್ಬಳಕೆ ಮಾಡಿಕೊಳ್ತಿರೋದನ್ನು ನೋಡಿ ಬೇಸತ್ತ ವಿವಿ ಈ ಹೊಸ ನಿಯಮ ಜಾರಿ ಮಾಡಿದೆ.

ಮೊದಮೊದಲು ಐಡಿ ಪ್ರೂಫ್, ಫೋನ್ ನಂಬರ್ ಗಳನ್ನು ಪಡೆದು ಪಾರ್ಕ್ ಪ್ರವೇಶಿಸಲು ಅನುಮತಿ ನೀಡಲಾಗುತ್ತಿತ್ತು. ಆದ್ರೆ ಅದಕ್ಕೂ ಕ್ಯಾರೇ ಅನ್ನದ ಪ್ರೇಮಿಗಳು ಪಾರ್ಕ್ ನಲ್ಲಿ ಸಲ್ಲಾಪ ಮಾಡೋದನ್ನು ಬಂದ್ ಮಾಡಲಿಲ್ಲ. ಹಾಗಾಗಿ ಈಗ ಹೆಸರು, ವಿಳಾಸ, ಫೋನ್ ನಂಬರ್ ಜೊತೆಗೆ ಮ್ಯಾರೇಜ್ ಸರ್ಟಿಫಿಕೇಟ್ ತೋರಿಸಿದ್ರೆ ಮಾತ್ರ ಎಂಟ್ರಿ ಸಿಗುತ್ತದೆ.

ಸಂಸಾರಸ್ಥರು ಮಾತ್ರ ಈ ಪಾರ್ಕ್ ಪ್ರವೇಶಿಸಬಹುದು. ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ, ಅವಿವಾಹಿತರಿಗೆ ಇಲ್ಲಿ ಎಂಟ್ರಿ ಇಲ್ಲ. ಯಾರಿಗೆ ಮದುವೆ ಆಗಿರುತ್ತದೆಯೋ ಅವರು ತಮ್ಮ ವಿವಾಹ ಪ್ರಮಾಣಪತ್ರ ತೋರಿಸಿ ಪಾರ್ಕ್  ಪ್ರವೇಶಿಸಬಹುದು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...