alex Certify
ಕನ್ನಡ ದುನಿಯಾ       Mobile App
       

Kannada Duniya

ವಾರೆವ್ಹಾ…! ಕದಿಯೋ ಮುನ್ನ ಕಳ್ಳನ ಕಸರತ್ತು ನೋಡಿ..!!

ಕಳ್ಳರ ಕೈ ಚಳಕವನ್ನ, ಕಳ್ಳರ ಕರಾಮತ್ತನ್ನ ನೀವೆಲ್ಲಾ ನೋಡಿರುತ್ತೀರಾ. ಆದ್ರೆ ಕದಿಯೋಕೆ ಮುನ್ನ ಕಳ್ಳನೊಬ್ಬ ಎಂತೆಂತಾ ಕಸರತ್ತು ಮಾಡಿದ್ದಾನೆ ಗೊತ್ತಾ…? ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದಿರೋ ಕಳ್ಳನ ಕಸರತ್ತು ನೋಡಿ ಈಗ ಆನ್ಲೈನ್ ದುನಿಯಾ ಎದ್ದು ಬಿದ್ದು ನಗ್ತಿದೆ.

ಕೊಯಂಬತ್ತೂರಿನಲ್ಲಿ ಬೆಳಗಿನ ಜಾವ ಐದು ಗಂಟೆ ಸುಮಾರಿಗೆ ಅಂಗಡಿ ಮುಂದೆ ಇರೋ ಬಲ್ಬ್ ಒಂದನ್ನ ಕದಿಯೋಕೆ ಕಳ್ಳನೊಬ್ಬ ಬರ್ತಾನೆ. ಮೆಲ್ಲನೆ ಆ ಬಲ್ಬ್ ಮುಂದೆ ನಿಂತುಕೊಂಡು ಆತ ಸರಿಯಾದ ಸಮಯ ನೋಡಿ ಅದನ್ನ ಕದಿಯೋಕೆ ಸ್ಕೆಚ್ ಹಾಕ್ತಾನೆ.

ಈ ವೇಳೆ ಜನರು ಓಡಾಡೋದನ್ನ ನೋಡಿದ ಆತ ವ್ಯಾಯಾಮ ಮಾಡೋನ ಹಾಗೆ ನಾಟಕ ಮಾಡ್ತಾನೆ. ಸ್ಟ್ರೆಚ್ಚಿಂಗ್ ವ್ಯಾಯಾಮಗಳನ್ನ ಮಾಡುತ್ತಾ ಬಲ್ಬ್ ಮೇಲೆ ಫೋಕಸ್ ಮಾಡ್ತಾನೆ.
ಹೀಗೆ ಕಸರತ್ತಿನ ನಾಟಕ ಆಡ್ತಾನೆ ಕೊನೆಗೂ ಆತ ಬಲ್ಬ್ ಕದಿಯೋದ್ರಲ್ಲಿ ಯಶಸ್ವಿಯಾಗ್ತಾನೆ.

ಸದ್ಯ ತಾನು ಮಾಡಿದ ಕೆಲಸ ಯಾರಿಗೂ ಗೊತ್ತಾಗಲಿಲ್ಲ ಅಂತ ಖುಷಿಪಟ್ಟಿದ್ದಾನೆ. ಆದ್ರೆ ಅಂಗಡಿ ಮುಂದೇನೆ ಇದ್ದ ಸಿಸಿ ಕ್ಯಾಮರ ಕಣ್ಣು ತಪ್ಪಿಸೋಕೆ ಅವನಿಂದ ಆಗಲೇ ಇಲ್ಲ…!

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...