alex Certify
ಕನ್ನಡ ದುನಿಯಾ       Mobile App
       

Kannada Duniya

ಏರ್ ಇಂಡಿಯಾ ವಿತರಿಸಿದ ಊಟದ ಜೊತೆ ಜಿರಳೆ ಫ್ರೀ…!

ದೆಹಲಿ ವಿಮಾನ ನಿಲ್ದಾಣದ ಏರ್ ಇಂಡಿಯಾ ಲಾಂಜ್ ನಲ್ಲಿ ಪ್ರಯಾಣಿಕರೊಬ್ಬರಿಗೆ ವಿತರಿಸಿದ ಊಟದಲ್ಲಿ ಜಿರಳೆ ಸಿಕ್ಕಿದೆ. ಬಿಸನೆಸ್ ಕ್ಲಾಸ್ ಪ್ರಯಾಣಿಕ ಹರಿಂದರ್ ಬವೇಜಾ ಎಂಬಾತ ಜಿರಳೆ ಸಹಿತ ಊಟದ ಫೋಟೋ ಕ್ಲಿಕ್ಕಿಸಿ ಅದನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದಾರೆ.

ಊಟದಲ್ಲಿ ಜಿರಳೆ ಸಿಕ್ಕಿರೋ ಬಗ್ಗೆ ಏರ್ ಇಂಡಿಯಾ ಪ್ರಯಾಣಿಕನ ಬಳಿ ಕ್ಷಮೆ ಕೇಳಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸೋದಾಗಿ ಭರವಸೆ ನೀಡಿದೆ. ದೆಹಲಿ ಏರ್ ಪೋರ್ಟ್ ಟರ್ಮಿನಲ್ 3ರಲ್ಲಿರೋ ಏರ್ ಇಂಡಿಯಾ ಲಾಂಜ್ ನಲ್ಲಿ ಈ ಘಟನೆ ನಡೆದಿತ್ತು.

ವಿಮಾನಗಳಲ್ಲಿ ನೀಡುವ ಊಟದಲ್ಲಿ ಹಲ್ಲಿ, ಜಿರಳೆ ಪತ್ತೆಯಾಗಿರೋದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಹಲವು ಬಾರಿ ಇಂತಹ ಪ್ರಮಾದಗಳು ನಡೆದಿವೆ. ಆದ್ರೂ ವಿಮಾನಯಾನ ಸಂಸ್ಥೆಗಳು ಶುಚಿತ್ವದ ಬಗ್ಗೆ ಗಮನಹರಿಸುತ್ತಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...