alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಮರಾದಲ್ಲಿ ಸೆರೆಯಾಗಿದೆ 7 ಮೊಟ್ಟೆ ಕಕ್ಕಿದ ಹಾವಿನ ದೃಶ್ಯ

ಕೇರಳದಲ್ಲಿ ನಾಗರ ಹಾವೊಂದು ಒಟ್ಟಿಗೆ 8 ಮೊಟ್ಟೆಗಳನ್ನು ನುಂಗಿ ಫಜೀತಿ ಅನುಭವಿಸಿದೆ. ಕೋಳಿ ಫಾರ್ಮ್ ಗೆ ದಾಳಿಯಿಟ್ಟಿದ್ದ ಹಾವು, ಮೊಟ್ಟೆಗಳನ್ನು ನುಂಗಿ ಅಸ್ವಸ್ಥಗೊಂಡು ಅಲ್ಲೇ ಮಲಗಿತ್ತು. ಫಾರ್ಮ್ ಮಾಲೀಕರು ಕೂಡಲೇ ಹಾವು ಹಿಡಿಯುವವರನ್ನು ಸ್ಥಳಕ್ಕೆ ಕರೆಸಿದ್ದಾರೆ.

ಸುಜಿತ್ ವಿಪಿ ಎಂಬುವವರು ಪೆಟ್ಟಿಗೆಯೊಳಗೆ ಮಲಗಿದ್ದ ನಾಗರ ಹಾವನ್ನು ಹೊರಕ್ಕೆ ತೆಗೆದುಕೊಂಡು ಬಂದ್ರು. ನೆಲಕ್ಕೆ ಬಿಡುತ್ತಿದ್ದಂತೆ ಹಾವು ಹೊಟ್ಟೆಯೊಳಗಿದ್ದ ಮೊಟ್ಟೆಗಳನ್ನು ಹೊರಹಾಕಿದೆ. ಒಂದೊಂದಾಗಿಯೇ 7 ಮೊಟ್ಟೆಗಳು ಹಾವಿನ ಹೊಟ್ಟೆಯಿಂದ ಹೊರಬಿದ್ದಿವೆ.

ಹಾವು ಮೊಟ್ಟೆ ವಾಂತಿ ಮಾಡ್ತಿರೋದನ್ನು ನೋಡಲು ಅಲ್ಲಿ ಜನ ಸೇರಲಾರಂಭಿಸಿದ್ರು. ಹಾಗಾಗಿ ಬೇಗ ಬೇಗ ಮೊಟ್ಟೆ ಕಕ್ಕಿದ ಹಾವು ಅಲ್ಲಿಂದ ಸರಸರನೆ ಹೊರಟು ಕಾಡು ಸೇರಿದೆ. ಈ ವಿಡಿಯೋವನ್ನು ಸುಜಿತ್ ಇಂಟರ್ನೆಟ್ನಲ್ಲಿ ಅಪ್ಲೋಡ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...