alex Certify
ಕನ್ನಡ ದುನಿಯಾ       Mobile App
       

Kannada Duniya

ಕಲ್ಲಿದ್ದಲು ಹಗರಣ : ಮಧು ಕೋಡಾಗೆ 3 ವರ್ಷ ಜೈಲು

ಬಹುಕೋಟಿ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧು ಕೋಡಾಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜೈಲು ಶಿಕ್ಷೆ ಜೊತೆಗೆ ಕೋಡಾ 25 ಲಕ್ಷ ರೂಪಾಯಿ ದಂಡ ನೀಡಬೇಕಾಗಿದೆ.

ಕಲ್ಲಿದ್ದಲು ನಿಕ್ಷೇಪ ಹಗರಣದಲ್ಲಿ ಈ ಹಿಂದೆಯೇ ಮಧು ಕೋಡಾರನ್ನು ಕೋರ್ಟ್ ದೋಷಿ ಎಂದು ತೀರ್ಪು ನೀಡಿತ್ತು. ಶಿಕ್ಷೆ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಿತ್ತು. ಇಂದು ಸಿಬಿಐ ವಿಶೇಷ ನ್ಯಾಯಾಲಯ ಕೋಡಾಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಕಲ್ಲಿದ್ದಲು ನಿಕ್ಷೇಪ ಹಗರಣದಲ್ಲಿ ಕಲ್ಲಿದ್ದಲು ಮಾಜಿ ಕಾರ್ಯದರ್ಶಿ ಎಚ್.ಸಿ.ಗುಪ್ತಾ, ಜಾರ್ಖಂಡ್ ಮಾಜಿ ಕಾರ್ಯದರ್ಶಿ ಅಶೋಕ್ ಕುಮಾರ್ ಬಸು ಅವರನ್ನೂ ಕೋರ್ಟ್ ಬುಧವಾರ ದೋಷಿ ಎಂದು ತೀರ್ಪು ನೀಡಿತ್ತು.

ಕೋಡಾಗೆ ನೀಡಿದ ಶಿಕ್ಷೆಯನ್ನೇ ಎಚ್.ಸಿ.ಗುಪ್ತಾಗೆ ಕೋರ್ಟ್ ವಿಧಿಸಿದೆ. ಗುಪ್ತಾ ಮೂರು ವರ್ಷ ಜೈಲು ಶಿಕ್ಷೆ  ಜೊತೆಗೆ 1 ಲಕ್ಷ ರೂಪಾಯಿ ದಂಡ ತೆರಬೇಕಾಗಿದೆ. ಈ ಹಗರಣದಲ್ಲಿ ಕೈಜೋಡಿಸಿರುವ VISUL ಕಂಪನಿಗೆ ಕೋರ್ಟ್ 50 ಲಕ್ಷ ದಂಡವಿಧಿಸಿದೆ. ಪ್ರಕರಣದ ಇತರ ಆರೋಪಿಗಳಿಗೂ ಕೋರ್ಟ್ ಶಿಕ್ಷೆ ವಿಧಿಸಿದೆ. ವಿಜಯ್ ಜೋಷಿಗೆ 3 ವರ್ಷ ಜೈಲು ಹಾಗೂ 2 ಲಕ್ಷ ರೂಪಾಯಿ ದಂಡ ಹಾಗೂ ಬಸುಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...