alex Certify
ಕನ್ನಡ ದುನಿಯಾ       Mobile App
       

Kannada Duniya

ರಸ್ತೆ ಅಪಘಾತದಲ್ಲಿ ಎನ್ಟಿಆರ್ ಪುತ್ರ ಹರಿಕೃಷ್ಣ ಸಾವು

ಆಂಧ್ರ ಸಿನಿಮಾ ರಂಗದ ಮೇರು ನಟ ಎನ್.ಟಿ. ರಾಮರಾವ್ ಪುತ್ರ, ಚಂದ್ರಬಾಬು ನಾಯ್ಡು ಸಂಬಂಧಿ ಮತ್ತು ಜೂನಿಯರ್ ಎನ್ಟಿಆರ್ ತಂದೆ ನಂದಮೂರಿ ಹರಿಕೃಷ್ಣ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ತೆಲಂಗಾಣದ ನೆಲಗೊಂಡ ಸಮೀಪ ನಡೆದ ಅಪಘಾತದಲ್ಲಿ ಹರಿಕೃಷ್ಣ ಸಾವನ್ನಪ್ಪಿದ್ದಾರೆ.

ಹರಿಕೃಷ್ಣ ನೆಲ್ಲೂರಿಗೆ ತೆರಳಿ ಅಲ್ಲಿಂದ ಹೈದ್ರಾಬಾದ್ ಗೆ ಕಾರಿನಲ್ಲಿ ವಾಪಸ್ಸಾಗುತ್ತಿದ್ದರು. ಈ ವೇಳೆ ನಿಯಂತ್ರಣ ಕಳೆದುಕೊಂಡ ಕಾರು ಅಪಘಾತಕ್ಕೀಡಾಗಿದೆ. ಪೊಲೀಸರ ಪ್ರಕಾರ ಘಟನೆ ನಡೆದ ಸಂದರ್ಭದಲ್ಲಿ ಹರಿಕೃಷ್ಣ ಕಾರು ಚಲಾಯಿಸುತ್ತಿದ್ದರು ಅಂತ ಹೇಳಲಾಗ್ತಿದೆ. ಕೂಡಲೇ ಅವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯ್ತು. ಹಾಗಿದ್ದರು ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ವಿಷಯ ತಿಳಿಯುತ್ತಿದ್ದ ಹಾಗೆ ಹರಿಕೃಷ್ಣ ಅವರ ಮಕ್ಕಳಾದ ಜೂನಿಯರ್ ಎನ್ಟಿಆರ್ ಮತ್ತು ಕಲ್ಯಾಣ್ ರಾಮ್ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಈ ಹಿಂದೆ ಅಂದ್ರೆ 2009ರಲ್ಲಿ ಕೂಡ ಜೂನಿಯರ್ ಎನ್ಟಿಆರ್ ಕಾರು ಅಪಘಾತದಲ್ಲಿ ಗಾಯಗೊಂಡಿದ್ದರು. ಹರಿಕೃಷ್ಣ ಅವರ ಮಗ ನಂದಮೂರಿ ಜಾನಕಿರಾಮ್ 2014ರಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...