alex Certify
ಕನ್ನಡ ದುನಿಯಾ       Mobile App
       

Kannada Duniya

ತಾಜ್ ಮಹಲ್ ಮುಂದೆ ಪೊರಕೆ ಹಿಡಿಯಲಿದ್ದಾರೆ ಯೋಗಿ

ತಾಜ್ ಮಹಲ್ ವಿಷ್ಯದ ಬಗ್ಗೆ ನಡೆಯುತ್ತಿರುವ ವಾದ-ವಿವಾದದ ಮಧ್ಯೆಯೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಾಜ್ ಮಹಲ್ ಗೆ ಭೇಟಿ ನೀಡಲಿದ್ದಾರೆ. ಯೋಗಿ ಇಂದು ತಾಜ್ ಮಹಲ್ ಗೆ ತೆರಳಲಿದ್ದಾರೆ. ಅರ್ಧ ಗಂಟೆ ತಾಜ್ ಮಹಲ್ ನಲ್ಲಿರುವ ಯೋಗಿ ತಾಜ್ ಮಹಲ್ ಮುಂದೆ ಸ್ವಚ್ಛತೆ ಕಾರ್ಯ ಕೈಗೊಳ್ಳಲಿದ್ದಾರೆ.

ಪಶ್ಚಿಮ ದ್ವಾರದಿಂದ ತಾಜ್ ಮಹಲ್ ಗೆ ಬರುವ ಯೋಗಿ ತಾಜ್ ಮಹಲ್ ಒಳಗೂ ಹೋಗಲಿದ್ದಾರೆ. ಯೋಗಿ ಜೊತೆ ಆಗ್ರಾದ 500 ಮಂದಿ ತಾಜ್ ಮಹಲ್ ಮುಂಭಾಗವನ್ನು ಸ್ವಚ್ಛಗೊಳಿಸಲಿದ್ದಾರೆ. ಯೋಗಿ ತಾಜ್ ಮಹತ್ವದ ಬಗ್ಗೆ ಭಾಷಣ ಮಾಡಲಿದ್ದಾರೆ ಎನ್ನಲಾಗ್ತಿದೆ.

ಈ ಹಿಂದೆ ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ತಾಜ್ ಮಹಲ್ ಗೆ ಭೇಟಿ ನೀಡಿದ್ದರು. ಎರಡು ವರ್ಷಗಳ ಹಿಂದೆ ಪ್ರೇಮಿಗಳ ದಿನದಂದು ಅಖಿಲೇಶ್ ಪತ್ನಿ ಡಿಂಪಲ್ ಜೊತೆ ತಾಜ್ ಮಹಲ್ ಗೆ ಹೋಗಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...