alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಬಾರಿ ಅಯೋಧ್ಯೆಯಲ್ಲಿ ದೀಪಾವಳಿ ಆಚರಿಸಲಿದ್ದಾರೆ ಯೋಗಿ

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಈ ವರ್ಷ ಅಕ್ಟೋಬರ್ 18ರಂದು ಅಯೋಧ್ಯೆಯಲ್ಲಿ ದೀಪಾವಳಿ ಆಚರಿಸಲಿದ್ದಾರೆ. ಸಿಎಂ ಯೋಗಿಯೊಂದೇ ಅಲ್ಲ ರಾಜ್ಯಪಾಲ ರಾಮ್ ನಾಯ್ಕ್ ಸೇರಿದಂತೆ ಪೂರ್ತಿ ಕ್ಯಾಬಿನೆಟ್ ರಾಮ ನಗರಿ ಅಯೋಧ್ಯೆಯಲ್ಲಿರಲಿದೆ.

ಹಿಂದು ಧರ್ಮದ ಪ್ರಕಾರ ತ್ರೇತಾಯುಗದಲ್ಲಿ ರಾವಣದ ವಧೆ ಮಾಡಿ ಲಂಕೆಯ ಮೇಲೆ ವಿಜಯ ಸಾಧಿಸಿ 14 ವರ್ಷಗಳ ವನವಾಸ ಮುಗಿಸಿ ಭಗವಂತ ಶ್ರೀರಾಮ ಅಯೋಧ್ಯೆಗೆ ವಾಪಸ್ ಬಂದ ವೇಳೆ ದೀಪಾವಳಿ ಆಚರಿಸಲಾಗಿತ್ತು. ಕಲಿಯುಗದಲ್ಲಿಯೂ ಈ ಬಾರಿ ಅದೇ ರೀತಿ ದೀಪಾವಳಿ ಆಯೋಜನೆ ಮಾಡಲು ಯೋಗಿ ಸರ್ಕಾರ ಮುಂದಾಗಿದೆ.

ಅಯೋಧ್ಯೆಯಲ್ಲಿ ಅಕ್ಟೋಬರ್ 18ರಂದು ಭವ್ಯ ದೀಪಾವಳಿ ಆಚರಿಸಲು ಯೋಗಿ ಸರ್ಕಾರ ಮುಂದಾಗಿದೆ. ಸರಯೂ ತಟದಲ್ಲಿ ಸಾವಿರಾರು ದೀಪಗಳನ್ನು ಬೆಳಗಲಾಗುವುದು. ಯುಪಿಯ ಕ್ಯಾಬಿನೆಟ್ ಸದಸ್ಯರೆಲ್ಲ ಅಲ್ಲಿರಲಿದ್ದಾರೆ. ಯೋಗಿ ಆದಿತ್ಯನಾಥ್ ಸರಯೂ ನದಿ ತಟದಲ್ಲಿ ಆರತಿ ಬೆಳಗಲಿದ್ದಾರೆ. ಜೊತೆಗೆ ರಾಮ್ ಲೀಲಾ ದರ್ಶನ ಮಾಡಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...