alex Certify
ಕನ್ನಡ ದುನಿಯಾ       Mobile App
       

Kannada Duniya

ಟಿ.ಟಿ.ಡಿ. ಯಿಂದ ಶೇಖರ್ ರೆಡ್ಡಿಗೆ ಅರ್ಧಚಂದ್ರ

reddydd

ತಿರುಪತಿ: ತಿರುಪತಿ ತಿರುಮಲ ದೇವಸ್ಥಾನಂ ಟ್ರಸ್ಟ್ ಸದಸ್ಯ ಸ್ಥಾನದಿಂದ, ಶೇಖರ್ ರೆಡ್ಡಿ ಅವರನ್ನು ವಜಾಗೊಳಿಸಲಾಗಿದೆ.

ಚೆನ್ನೈನಲ್ಲಿರುವ ಶೇಖರ್ ರೆಡ್ಡಿ ಮನೆಯ ಮೇಲೆ ಐ.ಟಿ. ಅಧಿಕಾರಿಗಳು ದಾಳಿ ಮಾಡಿದ್ದ ಸಂದರ್ಭದಲ್ಲಿ 74 ಕೋಟಿ ರೂ. ಹೊಸ ನೋಟು(2000 ರೂ. ಮುಖಬೆಲೆ) ಸೇರಿದಂತೆ 167 ಕೋಟಿ ರೂ. ನಗದು ಹಾಗೂ 128 ಕೆ.ಜಿ. ಚಿನ್ನ ಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ಅವರನ್ನು ಟಿ.ಟಿ.ಡಿ. ಸದಸ್ಯ ಸ್ಥಾನದಿಂದ ವಜಾಗೊಳಿಸಬೇಕೆಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನಿರ್ದೇಶನ ನೀಡಿದ್ದರು. ಅದರಂತೆ ಅವರನ್ನು ಮುಜರಾಯಿ ಇಲಾಖೆ ವಜಾಗೊಳಿಸಿ ಆದೇಶ ಹೊರಡಿಸಿದೆ.

ಉದ್ಯಮಿ ಶೇಖರ್ ರೆಡ್ಡಿ ಚೆನ್ನೈನಲ್ಲಿ ಅಪಾರ ಪ್ರಮಾಣದ ಬ್ಲಾಕ್ ಮನಿ ಹೊಂದಿದ್ದರಲ್ಲದೇ, ಚಿನ್ನದ ಖಜಾನೆಯನ್ನೇ ಮನೆಯಲ್ಲಿಟ್ಟುಕೊಂಡಿದ್ದರು. ಐ.ಟಿ. ದಾಳಿಯ ಸಂದರ್ಭದಲ್ಲಿ ನಗದು ಹಾಗೂ ಚಿನ್ನ ಪತ್ತೆಯಾಗಿದ್ದು, ದೇಶದಲ್ಲಿಯೇ ಅತಿ ದೊಡ್ಡದಾದ ದಾಳಿ ಇದೆಂದು ಹೇಳಲಾಗಿತ್ತು. ಇದು ದೇಶಾದ್ಯಂತ ಸುದ್ದಿಯಾಗಿತ್ತು. ಈ ಹಿನ್ನಲೆಯಲ್ಲಿ ಅವರನ್ನು ಟಿ.ಟಿ.ಡಿ. ಸದಸ್ಯ ಸ್ಥಾನದಿಂದ ಕೈ ಬಿಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...