alex Certify
ಕನ್ನಡ ದುನಿಯಾ       Mobile App
       

Kannada Duniya

ಕೂದಲೆಳೆ ಅಂತರದಲ್ಲಿ ಪಾರಾದ ಫುಟ್ ಬಾಲ್ ತಾರೆ

ronaldinho

ಅಂತರರಾಷ್ಟ್ರೀಯ ಖ್ಯಾತಿಯ ಫುಟ್ ಬಾಲ್ ಆಟಗಾರ ಬ್ರೆಜಿಲ್ ನ ರೊನಾಲ್ಡಿನೋ ಅವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ಘಟನೆ ಕೇರಳದಲ್ಲಿ ನಡೆದಿದ್ದು ಘಟನೆಯಿಂದಾಗಿ ರೊನಾಲ್ಡಿನೋ ಆಘಾತಗೊಂಡಿದ್ದಾರೆ ಎಂದು ಹೇಳಲಾಗಿದೆ.

ಕೇರಳದ ಕೋಜಿಕ್ಕೋಡ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರೊನಾಲ್ಡಿನೋ ಕಾರ್ಯಕ್ರಮ ಮುಗಿಸಿ ಕಾರಿನಲ್ಲಿ ಹೊರಟಿದ್ದು, ಸಿಗ್ನಲ್ ಬಳಿ ಅವರ ಕಾರಿನ ಮುಂದೆಯೇ ಟ್ರಾಫಿಕ್ ಕಂಬ ಬಿದ್ದಿದೆ. ಕಂಬ ಬೀಳುವುದನ್ನು ಕಂಡ ಕಾರಿನ ಚಾಲಕ ತಕ್ಷಣ ಬ್ರೇಕ್ ಹಾಕಿದ್ದು, ಸ್ವಲ್ಪದರಲ್ಲಿಯೇ ಅಪಾಯ ತಪ್ಪಿದೆ. ಆಕಸ್ಮಾತ್ ಕಾರಿನ ಮೇಲೆ ಟ್ರಾಫಿಕ್ ಕಂಬ ಬಿದ್ದಿದ್ದರೆ ಭಾರಿ ಅನಾಹುತವಾಗುವ ಸಾಧ್ಯತೆ ಇತ್ತು. ಈ ಕಂಬ ತುಕ್ಕು ಹಿಡಿದಿದ್ದು ಬದಲಿಸುವಂತೆ ನಾಗರೀಕರು ಹಲವು ಬಾರಿ ಮನವಿ ಮಾಡಿದ್ದರು.

ಆದರೆ ಕೋಜಿಕ್ಕೋಡ್ ಟ್ರಾಫಿಕ್ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದರು. ಇಂದು ರೊನಾಲ್ಡಿನೋ ಕಾರಿನಲ್ಲಿ ಬರುವಾಗ ಅವರ ಕಾರಿನ ಎದುರಿನಲ್ಲಿಯೇ ಕಂಬ ಬಿದ್ದಿದೆ. ಇದರಿಂದ ರೊನಾಲ್ಡಿನೋ ಆಘಾತಕ್ಕೆ ಒಳಗಾದರೂ ಬಳಿಕ ಸಾವರಿಸಿಕೊಂಡು ಅಲ್ಲಿಂದ ಹೊರಟಿದ್ದಾರೆ. ನಂತರ ಟ್ರಾಫಿಕ್ ಪೊಲೀಸರು ಕಂಬ ತೆರವುಗೊಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...