alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಲ್ಫಿ ಕ್ರೇಜ್ ಗೆ ಹಾರಿ ಹೋಯ್ತು ಮತ್ತಿಬ್ಬರ ಜೀವ

ಸೆಲ್ಫಿ ಕ್ರೇಜ್ ನಿಂದಾಗಿ ಇಬ್ಬರು ಬಾಲಕರು ಸಾವನ್ನಪ್ಪಿರುವ ಘಟನೆ ಪಂಜಾಬಿನಲ್ಲಿ ನಡೆದಿದೆ. ಈ ಇಬ್ಬರು ಬಾಲಕರು ರೈಲ್ವೆ ಬ್ರಿಡ್ಜ್ ಮೇಲೆ ಸೆಲ್ಫಿ ತೆಗೆಯುವಾಗ ರೈಲು ಬರುವುದನ್ನು ಗಮನಿಸದೆ ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಮೃತ ಬಾಲಕರನ್ನು ಏಳನೇ ತರಗತಿ ವಿದ್ಯಾರ್ಥಿ ಯುವರಾಜ್ ಸಿಂಗ್ ಹಾಗೂ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಗೌರವ್ ಕುಮಾರ್ ಎಂದು ಗುರುತಿಸಲಾಗಿದೆ. ಈ ವಿದ್ಯಾರ್ಥಿಗಳು ತಮ್ಮ ಸ್ನೇಹಿತರೊಂದಿಗೆ ದೇವರ ಪ್ರಾರ್ಥನೆಗೆಂದು ತೆರಳಿದ್ದರೆಂದು ತಿಳಿದುಬಂದಿದೆ.

ಈ ಘಟನೆ ನಡೆದ ನಂತರ ಅವರ ಜೊತೆಗಿದ್ದ ಸಹಪಾಠಿಗಳು ಯಾರಿಗೂ ತಿಳಿಸದೆ ಓಡಿ ಹೋಗಿದ್ದಾರೆ. ಆದರೆ ರೈಲಿನಲ್ಲಿ ಬರುತ್ತಿದ್ದ ಪ್ರಯಾಣಿಕರು ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪಾಲಕರಿಗೆ ವಿಷಯ ಮುಟ್ಟಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...