alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಬೈಲ್ ನಲ್ಲಿ ಮಾತನಾಡೋ ಚಾಲಕನನ್ನು ಕ್ಲಿಕ್ಕಿಸಿ, ಬಹುಮಾನ ಪಡೆಯಿರಿ….

602580-bus-driver-2

ದಿನೇ ದಿನೇ ಹೆಚ್ತಾ ಇರೋ ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ಉತ್ತರಪ್ರದೇಶದ ರಸ್ತೆ ಸಾರಿಗೆ ಇಲಾಖೆ ಯೊಸ ಯೋಜನೆಯನ್ನು ಜಾರಿ ಮಾಡಿದೆ. ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ಚಾಲಕರು ಮೊಬೈಲ್ ನಲ್ಲಿ ಮಾತನಾಡುವುದರಿಂದ್ಲೇ ಎಷ್ಟೋ ಬಾರಿ ದುರ್ಘಟನೆಗಳು ಸಂಭವಿಸುತ್ತವೆ.

ಹಾಗಾಗಿ ಬಸ್ ಓಡಿಸುವಾಗ ಮೊಬೈಲ್ ನಲ್ಲಿ ಚಾಲಕರು ಮಾತನಾಡಿದ್ರೆ, ಆ ಫೋಟೋ ಕ್ಲಿಕ್ಕಿಸಿ ಪ್ರಯಾಣಿಕರು ಸಾರಿಗೆ ಇಲಾಖೆಯ ವಾಟ್ಸಾಪ್ ಗೆ ಕಳಿಸಬಹುದು. ಹಾಗೆ ಮಾಡಿದಲ್ಲಿ ನೀವು ಬಹುಮಾನವನ್ನೂ ಗೆಲ್ಲಬಹುದು. ಉತ್ತರ ಪ್ರದೇಶದ ಸಾರಿಗೆ ಸಚಿವ ಸ್ವತಂತ್ರ ದೇವ್ ಸಿಂಗ್ ಈ ಯೋಜನೆಯನ್ನು ಪ್ರಕಟಿಸಿದ್ದಾರೆ.

ಫೋಟೋದಲ್ಲಿರುವ ಚಾಲಕನಿಗೆ ದಂಡ ವಿಧಿಸಲಾಗುತ್ತದೆ, ಫೋಟೋ ಕಳಿಸಿಕೊಟ್ಟ ಪ್ರಯಾಣಿಕರಿಗೆ ನಗದು ಬಹುಮಾನ ದೊರೆಯುತ್ತದೆ. ಚಾಲಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಯೋಜನೆಯನ್ನು ಜಾರಿ ಮಾಡಲಾಗಿದೆ. ವಾಹನ ಚಾಲನೆ ಮಾಡುವಾಗ ಮೊಬೈಲ್ ನಲ್ಲಿ ಮಾತನಾಡಿದ್ರೆ ಮೋಟಾರು ವಾಹನ ಕಾಯ್ದೆ ಪ್ರಕಾರ 1000 ರೂ. ದಂಡ ಹಾಗೂ 6 ತಿಂಗಳು ಜೈಲು ಶಿಕ್ಷೆ ವಿಧಿಸಬೇಕು.

ಆದ್ರೆ ಆ ಕಾನೂನು ಕಟ್ಟುನಿಟ್ಟಾಗಿ ಜಾರಿಯಾಗಿಲ್ಲ. ಸಂಚಾರ ನಿಯಮ ಉಲ್ಲಂಘನೆಯಿಂದ್ಲೇ ಅತಿ ಹೆಚ್ಚು ಅಪಘಾತಗಳು ಸಂಭವಿಸುತ್ತವೆ. ಉತ್ತರಪ್ರದೇಶದಲ್ಲಿ ಒಟ್ಟು 11,851 ಸರ್ಕಾರಿ ಬಸ್ ಗಳಿವೆ. ಪ್ರತಿನಿತ್ಯ 3 ಮಿಲಿಯನ್ ಕಿಲೋ ಮೀಟರ್ ಚಲಿಸುತ್ತವೆ. 1.4 ಮಿಲಿಯನ್ ಜನರು ಬಸ್ ಗಳಲ್ಲಿ ಪ್ರಯಾಣಿಸ್ತಾರೆ. ಇವುಗಳಿಂದ ಬರುವ ಆದಾಯ ದಿನಕ್ಕೆ 70 ಮಿಲಿಯನ್.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...