alex Certify
ಕನ್ನಡ ದುನಿಯಾ       Mobile App
       

Kannada Duniya

ಶೌಚಾಲಯ ಸ್ವಚ್ಛಗೊಳಿಸಿದ ಯೋಗಿ ಮಂತ್ರಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹುಟ್ಟುಹಬ್ಬ ಹಾಗೂ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ದೇಶದಾದ್ಯಂತ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ಈ ಅಭಿಯಾನದಲ್ಲಿ ಸ್ವಚ್ಛತೆ ಮಾಡುವುದಕ್ಕಿಂತ ಬಹುತೇಕ ನಾಯಕರು ಹಾಗೂ ಅಧಿಕಾರಿಗಳು ಫೋಟೋಕ್ಕೆ ಫೋಸ್ ಕೊಡುತ್ತಿದ್ದಾರೆ. ಆದ್ರೆ ಉತ್ತರ ಪ್ರದೇಶ ಸಚಿವರೊಬ್ಬರು ಎಲ್ಲರಿಗೂ ಮಾದರಿಯಾಗಿದ್ದಾರೆ.

ಉತ್ತರ ಪ್ರದೇಶದ ಯೋಗಿ ಸರ್ಕಾರದಲ್ಲಿ ಸಚಿವರಾಗಿರುವ ಸ್ವತಂತ್ರದೇವ್ ಸಿಂಹ ಖುದ್ದು ಸಾರ್ವಜನಿಕ ಶೌಚಾಲಯನ್ನು ಸ್ವಚ್ಛಗೊಳಿಸಿದ್ದಾರೆ. ತಪಾಸಣೆ ವೇಳೆ ಬಸ್ ನಿಲ್ದಾಣದ ಶೌಚಾಲಯದಲ್ಲಿ ಕೊಳಕು ನೋಡಿದ ಸ್ವತಂತ್ರದೇವ್ ತಕ್ಷಣ ಶೌಚಾಲಯ ಸ್ವಚ್ಚತೆಗಿಳಿದಿದ್ದಾರೆ.

ಶನಿವಾರ ಸ್ವತಂತ್ರದೇವ್ ಬಸ್ ನಿಲ್ದಾಣದ ಶೌಚಾಲಯ ಸ್ವಚ್ಛಗೊಳಿಸಿದ್ದಾರೆ. ಕೊಳಕಾದ ಶೌಚಾಲಯ ನೋಡಿ ದಂಗಾದ ಸ್ವತಂತ್ರದೇವ್ ತಕ್ಷಣ ಕಾರ್ಮಿಕರಿಂದ ಪಿನೈಲ್ ಹಾಗೂ ನೀರು ಕೇಳಿದ್ದಾರೆ. ಅಲ್ಲಿ ಎಸೆದಿದ್ದ ಬಟ್ಟೆಯನ್ನು ತೆಗೆದುಕೊಂಡು ಕ್ಲೀನಿಂಗ್ ಶುರುಮಾಡಿದ್ದಾರೆ. ಇವರಿಗೆ ಶಾಸಕರೊಬ್ಬರು ಸಾಥ್ ನೀಡಿದ್ದರು. ಬಸ್ ನಿಲ್ದಾಣದ ಶೌಚಾಲಯ ಸ್ವಚ್ಛವಾಗಿರುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಸಚಿವರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...