alex Certify
ಕನ್ನಡ ದುನಿಯಾ       Mobile App
       

Kannada Duniya

ಇಂದಿನಿಂದ ಅ.2 ರವರೆಗೆ ನಡೆಯಲಿದೆ `ಸ್ವಚ್ಛತೆಯೇ ಸೇವೆ’ ಅಭಿಯಾನ

ಗಾಂಧಿ ಜಯಂತಿ ಹತ್ತಿರ ಬರ್ತಿದೆ. ಅಕ್ಟೋಬರ್ 2 ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಇಂದಿನಿಂದ ಅಂದ್ರೆ ಸೆಪ್ಟೆಂಬರ್ 15ರಿಂದ ಸ್ವಚ್ಛ ಭಾರತ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಅಭಿಯಾನಕ್ಕೆ ಸ್ವಚ್ಛತೆಯೇ ಸೇವೆ ಎಂದು ಹೆಸರಿಟ್ಟಿದ್ದಾರೆ.

ಸ್ವಚ್ಛತೆ ಹಾಗೂ ಶೌಚಾಲಯ ನಿರ್ಮಾಣಕ್ಕೆ ಜನರನ್ನು ಪ್ರೋತ್ಸಾಹಿಸುವುದು ಈ ಅಭಿಯಾನದ ಮೂಲ ಉದ್ದೇಶವಾಗಿದೆ. ಜನಸಾಮಾನ್ಯರ ಮೂಲಕ ಬಡ ಜನರಿಗೆ ಸ್ವಚ್ಛ ಭಾರತ ಅಭಿಯಾನ ತಲುಪಿಸುವ ಉದ್ದೇಶ ಹೊಂದಿದ್ದಾರೆ ಪ್ರಧಾನಿ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಕೇಂದ್ರದ ಮಂತ್ರಿಗಳು, ಗರ್ವನರ್, ಸಂಸದರು, ಮುಖ್ಯ ಮಂತ್ರಿಗಳು, ಧರ್ಮ ಗುರುಗಳು, ಅಧಿಕಾರಿಗಳು ಭಾಗಿಯಾಗಲಿದ್ದಾರೆ.

ಅಭಿಯಾನದ 15 ದಿನಗಳಲ್ಲಿ ಬರುವ ಮೂರು ಭಾನುವಾರಗಳಲ್ಲಿ ಅಂದ್ರೆ ಸೆಪ್ಟೆಂಬರ್ 15, ಸೆಪ್ಟೆಂಬರ್ 24 ಮತ್ತು ಅಕ್ಟೋಬರ್ 1ರಂದು ಶ್ರಮದಾನ ಮಾಡಲು ಹೆಚ್ಚಿನ ಜನರನ್ನು ಆಹ್ವಾನಿಸಲಾಗಿದೆ. ಸಾರ್ವಜನಿಕ ಸ್ಥಳ, ಬಸ್ ನಿಲ್ದಾಣ, ಶಾಲಾ-ಕಾಲೇಜು, ಆಸ್ಪತ್ರೆಗಳ ಸ್ವಚ್ಛತೆ ಕಾರ್ಯ ನಡೆಯಲಿದೆ.

ಆಯ್ಕೆಯಾಗಿರುವ 15 ಪ್ರವಾಸಿ ಸ್ಥಳಗಳಲ್ಲಿ ಅಕ್ಟೋಬರ್ 1ರಂದು ವಿಶೇಷ ಸ್ವಚ್ಛತೆ ಕಾರ್ಯ ನಡೆಯಲಿದೆ. ಸೆಪ್ಟೆಂಬರ್ 17ನ್ನು ಸೇವಾ ದಿನವೆಂದು ಘೋಷಣೆ ಮಾಡಲಾಗಿದ್ದು, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೆಪ್ಟೆಂಬರ್ 17ರಂದು ಕರ್ನಾಟಕ ಹಳ್ಳಿಯೊಂದರಲ್ಲಿ ಸ್ವಚ್ಛತೆ ಕಾರ್ಯ ನಡೆಸಲಿದ್ದಾರೆ.

ಸೆಪ್ಟೆಂಬರ್ 17ರಂದು ದೂರದರ್ಶನದಲ್ಲಿ ಟಾಯ್ಲೆಟ್ ಏಕ್ ಪ್ರೇಮ ಕಥಾ ಚಿತ್ರ ಪ್ರದರ್ಶನಗೊಳ್ಳಲಿದೆ. ಅಕ್ಟೋಬರ್ 2 ಗಾಂಧಿ ಜಯಂತಿಯನ್ನು ಸ್ವಚ್ಛ ಭಾರತ ದಿನವೆಂದು ಆಚರಣೆ ಮಾಡಲಾಗುವುದು. ಸ್ಥಳೀಯರು ತಮ್ಮ ಸುತ್ತಮುತ್ತ ಕೈಗೊಂಡ ಸ್ವಚ್ಛತಾ ಕಾರ್ಯಕ್ರಮಗಳನ್ನು mygov.in ನಲ್ಲಿ ಅಪ್ಲೋಡ್ ಮಾಡಬಹುದಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...