alex Certify
ಕನ್ನಡ ದುನಿಯಾ       Mobile App
       

Kannada Duniya

ಜನ ಜಾಗೃತಿಗಾಗಿ 550 ಕಿ.ಮೀ. ಈಜಲಿದ್ದಾಳೆ ಬಾಲೆ

CLEAN GANGAಕ್ಲೀನ್ ಗಂಗಾ ಅಭಿಯಾನದ ಬಗ್ಗೆ ಜನಜಾಗೃತಿ ಮೂಡಿಸಲು ಬಾಲಕಿಯೊಬ್ಬಳು ವಿಶಿಷ್ಟ ಸಾಹಸಕ್ಕೆ ಮುಂದಾಗಿದ್ದಾಳೆ. 11 ವರ್ಷದ ಬಾಲಕಿ ಶ್ರದ್ಧಾ ಶುಕ್ಲಾ, ಕಾನ್ಪುರ ಮತ್ತು ವಾರಣಾಸಿ ಮಧ್ಯೆ 550 ಕಿ.ಮೀ. ದೂರವನ್ನು 70 ಗಂಟೆಗಳಲ್ಲಿ ಈಜಲಿದ್ದಾಳೆ.

ಪುಟಾಣಿ ಮೀನು ಅಂತಾನೇ ಪ್ರಸಿದ್ಧಳಾಗಿರುವ ಶ್ರದ್ಧಾ, ಈಗಾಗ್ಲೇ ಈ ಸಾಹಸಕ್ಕೆ ಚಾಲನೆ ಕೊಟ್ಟಿದ್ದಾಳೆ. ಕಾನ್ಪುರದ Massacre ಘಾಟ್ ನಿಂದ ಈಜಲು ಶುರುಮಾಡಿದ್ದಾಳೆ. ಸಾಂಪ್ರದಾಯಿಕ ಪೂಜೆ ಹಾಗೂ ಮಂತ್ರೋಚ್ಛಾರಣೆಯ ಬಳಿಕ ಶ್ರದ್ಧಾ ಶುಕ್ಲಾ ನೀರಿಗಿಳಿದಿದ್ದಾಳೆ. ತನ್ನ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದೇ ಆದಲ್ಲಿ ಶ್ರದ್ಧಾ ಶುಕ್ಲಾ ಈ ಸಾಧನೆ ಮಾಡಿದ ಭಾರತದ ಮೊದಲ ಬಾಲಕಿ ಎನಿಸಿಕೊಳ್ಳಲಿದ್ದಾಳೆ.

2014ರಲ್ಲಿ ಕೂಡಾ ಶ್ರದ್ಧಾ ಗಂಗಾ ನದಿಯಲ್ಲಿ ಈಜಿದ್ದಳು. ಕಾನ್ಪುರದಿಂದ ಅಲಹಾಬಾದ್ ವರೆಗೆ 228 ಕಿಲೋ ಮೀಟರ್ ದೂರ ಈಜುವ ಮೂಲಕ ಸಾಧನೆ ಮಾಡಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...