alex Certify
ಕನ್ನಡ ದುನಿಯಾ       Mobile App
       

Kannada Duniya

ಹೀಗೂ ಪಾಠ ಮಾಡ್ತಾರೆ ಈ ಶಿಕ್ಷಕಿಯರು

tel-helmet

ಹೈದರಾಬಾದ್: ಬಿಹಾರದ ಸರ್ಕಾರಿ ಕಚೇರಿಯೊಂದರ ಮೇಲ್ಛಾವಣಿ ಕಳಚಿ ಬೀಳುವ ಕಾರಣಕ್ಕೆ ನೌಕರರು ಹೆಲ್ಮೆಟ್ ಧರಿಸಿ ಕೆಲಸ ಮಾಡಿದ್ದು, ಇತ್ತೀಚೆಗಷ್ಟೇ ಸುದ್ದಿಯಾಗಿತ್ತು.

ಈಗ ತೆಲಂಗಾಣದ ಸರದಿ. ಮೇದಕ್ ಜಿಲ್ಲೆ ಚಿನ್ನ ಶಂಕರಮ್ ಪೇಟೆಯ ಜಿಲ್ಲಾ ಪರಿಷತ್ ಶಾಲೆಯ ಶಿಕ್ಷಕಿಯರು ಹೆಲ್ಮೆಟ್ ಧರಿಸಿ ಪಾಠ ಮಾಡಿದ್ದಾರೆ.

ಈ ಶಾಲೆ ಶಿಥಿಲಾವಸ್ಥೆಯಲ್ಲಿದ್ದು, ಮೇಲ್ಛಾವಣೆ ಕಳಚಿ ಬಿದ್ದು, ಶಿಕ್ಷಕಿಯೊಬ್ಬರು ಗಾಯಗೊಂಡಿದ್ದಾರೆ. ಶಾಲಾ ಕಟ್ಟಡವನ್ನು ದುರಸ್ತಿಗೊಳಿಸಬೇಕು. ಇಲ್ಲವಾದರೆ, ಹೊಸ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಶಾಲೆಯನ್ನು ಸ್ಥಳಾಂತರಿಸಬೇಕೆಂದು ಶಿಕ್ಷಕಿಯರು ಹಲವು ಬಾರಿ ಮನವಿ ಮಾಡಿದ್ದಾರೆ.

ಮಕ್ಕಳ ಮತ್ತು ಶಿಕ್ಷಕರ ಹಿತ ದೃಷ್ಠಿಯಿಂದ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದರೂ, ಆಡಳಿತ ಮಾತ್ರ ಸ್ಪಂದಿಸಿಲ್ಲ.

ಇದರಿಂದ ಬೇಸತ್ತ ಶಿಕ್ಷಕಿಯರು ಹೆಲ್ಮೆಟ್ ಧರಿಸಿಕೊಂಡೇ ಶಾಲೆಯಲ್ಲಿ ಪಾಠ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಕಟ್ಟಡದ ಮೇಲ್ಛಾವಣಿ ದುರಸ್ತಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...