alex Certify
ಕನ್ನಡ ದುನಿಯಾ       Mobile App
       

Kannada Duniya

ಸಹಪಾಠಿಯಿಂದ ವಿದ್ಯಾರ್ಥಿ ಕೊಲೆ : ಕಾರಣ ಕೇಳಿ ದಂಗಾದ ಪೊಲೀಸ್

ಉತ್ತರ ಪ್ರದೇಶದ ದೇವರಿಯಾ ಜಿಲ್ಲೆಯಲ್ಲಿ ದಂಗಾಗಿಸುವ ಘಟನೆ ನಡೆದಿದೆ. ನಾಲ್ಕನೇ ಕ್ಲಾಸ್ ವಿದ್ಯಾರ್ಥಿ ತನ್ನ ಸಹಪಾಠಿಯನ್ನು ಶಾಲೆಯಲ್ಲಿ ಹತ್ಯೆ ಮಾಡಿದ್ದಾನೆ. ಕೊಲೆಗೆ ಕಾರಣ ಕೇಳಿ ಪೊಲೀಸರು ದಂಗಾಗಿದ್ದಾರೆ.

ಮೋಹನ್ ಪಾಂಡೆ ಮೃತ ವಿದ್ಯಾರ್ಥಿ. ಮಾಧ್ಯಮಿಕ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿರುವ ಬಾಲಕ ಮಂಗಳವಾರ ಕೊಲೆಯಾಗಿದ್ದಾನೆ. ಶಾಲೆಯಲ್ಲಿಯೇ ಸಹ ವಿದ್ಯಾರ್ಥಿ ಮೋಹನ್ ನನ್ನು ಹತ್ಯೆಗೈದಿದ್ದಾನೆ. ಮಧ್ಯಾಹ್ನದ ಊಟದ ವೇಳೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಇದೇ ಕೊಲೆಗೆ ಕಾರಣ ಎನ್ನಲಾಗಿದೆ.

ಆರೋಪಿ ವಿದ್ಯಾರ್ಥಿ ಇಟ್ಟಿಗೆಯಿಂದ ಮೋಹನ್ ಗೆ ಹೊಡೆದಿದ್ದಾನೆ. ಘಟನೆ ನಡೆದ ತಕ್ಷಣ ಶಿಕ್ಷಕರು ಸ್ಥಳೀಯ ಆಸ್ಪತ್ರೆಗೆ ಮೋಹನ್ ನನ್ನು ದಾಖಲಿಸಿದ್ದಾರೆ. ಆದ್ರೆ ಜಿಲ್ಲಾಸ್ಪತ್ರೆಗೆ ಸಾಗಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೋಹನ್ ಸಾವನ್ನಪ್ಪಿದ್ದಾನೆ.

ಮರಣೋತ್ತರ ಪರೀಕ್ಷೆ ನಡೆಸದೆ ಶವ ನೀಡುವಂತೆ ಶಿಕ್ಷಕ ಒತ್ತಾಯ ಮಾಡಿದ್ದಾನೆ ಎನ್ನಲಾಗಿದೆ. ಇದು ಮೃತನ ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆಸ್ಪತ್ರೆ ಮುಂದೆಯೇ ಪ್ರತಿಭಟನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...