alex Certify
ಕನ್ನಡ ದುನಿಯಾ       Mobile App
       

Kannada Duniya

OMG! 8 ನೇ ತರಗತಿ ಪಾಸಾದವನಿಂದ ಶಸ್ತ್ರ ಚಿಕಿತ್ಸೆ…!

ಸಾಮಾಜಿಕ ಜಾಲತಾಣದಲ್ಲಿ ಸದ್ಯ 8ನೇ ತರಗತಿ ಪಾಸಾದವನೊಬ್ಬ ಖಾಸಗಿ ಆಸ್ಪತ್ರೆಯಲ್ಲಿ ರೋಗಿಗೆ ಚಿಕಿತ್ಸೆ ನೀಡುತ್ತಿರುವ ದೃಶ್ಯ ವೈರಲ್​ ಆಗ್ತಾ ಇದೆ. ಅಂದ ಹಾಗೆ ಈ ಆಸ್ಪತ್ರೆ ಇರೋದು ಉತ್ತರ ಪ್ರದೇಶದ ಶಾಮ್ಲಿಯಲ್ಲಿ.

ಈ ಆಸ್ಪತ್ರೆಯ ಮಾಲೀಕ ನರ್​ದೇವ್​​ ಸಿಂಗ್​, 8ನೇ ಕ್ಲಾಸ್​ ಪಾಸ್​​ ಆಗಿದ್ದಾನೆ. ಈತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ದೃಶ್ಯಗಳು ವೈರಲ್​ ಆಗಿದೆ. ಆಘಾತಕಾರಿ ಸಂಗತಿಯೆಂದರೆ ಈತ ಶಸ್ತ್ರ ಚಿಕಿತ್ಸಾ ಕೊಠಡಿಯಲ್ಲಿದ್ದು, ಶಸ್ತ್ರ ಚಿಕಿತ್ಸೆಗೆ ತಯಾರಿಯನ್ನೂ ನಡೆಸಿದ್ದಾನೆ.

ಈ ಸುದ್ದಿ ತಿಳಿಯುತ್ತಿದಂತೆ ಆ್ಯಕ್ಟಿಂಗ್​​ ಚೀಫ್​​ ಮೆಡಿಕಲ್​ ಆಫೀಸ್​​ ಅಧಿಕಾರಿ, ಅಶೋಕ್​ ಕುಮಾರ್​ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆ ಮುಚ್ಚಿಸಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದಾಗ ಅಶೋಕ್​ ಕುಮಾರ್​ ಗೆ ಸತ್ಯಾಸತ್ಯತೆ ದರ್ಶನವಾಗಿದೆ.

ಈ ಆಸ್ಪತ್ರೆಗೆ ಬೀಗ ಹಾಕಿದ್ದು, ಇದು ಮೊದಲೇನಲ್ಲ. ಈ ಹಿಂದೆಯೂ ಇಂತಹ ಪ್ರಕರಣ ಬೆಳಕಿಗೆ ಬಂದಾಗ, ಬೀಗ ಮುದ್ರೆ ಹಾಕಲಾಗಿತ್ತು. ಆದ್ರೆ, ಆಸ್ಪತ್ರೆಯ ಮಾಲೀಕ ತನ್ನ ರಾಜಕೀಯ ಪ್ರಭಾವ ಬಳಸಿ ಮತ್ತೆ ಆರಂಭಿಸಿದ್ದಾನೆ. ಇನ್ನು ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೆ 20 ರೋಗಿಗಳು ಕಳೆದ ವರ್ಷ ಸಾವನ್ನಪ್ಪಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...