alex Certify
ಕನ್ನಡ ದುನಿಯಾ       Mobile App
       

Kannada Duniya

ಬಹಿರಂಗವಾಯ್ತು ದುಬಾರಿ ಕಾರಿನ ಹಿಂದಿನ ಅಸಲಿ ‘ರಹಸ್ಯ’

ಕೇರಳದ ಪ್ರವಾಹಕ್ಕೆ ದೇಣಿಗೆ ನೀಡಲಾದ ಹಣದಲ್ಲಿ ಅಧಿಕಾರಿಗಳು ಐಷಾರಾಮಿ ಕಾರ್ ಖರೀದಿ ಮಾಡಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣ ಟ್ವಿಟರ್ ಹಾಗೂ ಫೇಸ್ ಬುಕ್ ನಲ್ಲಿ ಹರಿದಾಡುತ್ತಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಜಾಗ್ವಾರ್ ಕಾರೊಂದರ ಫೋಟೋ ಕೂಡಾ ಹಾಕಲಾಗಿತ್ತು. ಆದರೆ ಈಗ ಈ ಫೋಟೋ ಕುರಿತ ಅಸಲಿ ಸತ್ಯ ಬಹಿರಂಗವಾಗಿದೆ.

ಕಾರಿನ ಮೇಲಿದ್ದ ಸರ್ಕಾರದ ನಾಮಫಲಕದಿಂದಾಗಿ ಬಹುತೇಕರು ಈ ಸುದ್ದಿ ಸತ್ಯವಿರಬಹುದೆಂದುಕೊಂಡಿದ್ದರು. ಅಲ್ಲದೆ ಪ್ರವಾಹ ನಿಧಿಗೆ ಸಂಗ್ರಹವಾದ ಹಣದಲ್ಲಿ ಭ್ರಷ್ಟಾಚಾರ ನಡೆದಿರಬಹುದೆಂಬ ಊಹಾಪೋಹ ಹರಿದಾಡಿತ್ತು. ಈ ಟ್ವಿಟನ್ನು 2500 ಜನ ರೀ-ಟ್ವಿಟ್ ಮಾಡಿದ್ದು, 3200 ಲೈಕ್ ಸಿಕ್ಕಿದ್ದವು. ಅದೇ ಜಾಗ್ವಾರ್ ಕಾರ್ ನ ಫೋಟೋವನ್ನು ಫೇಸ್ ಬುಕ್ ನಲ್ಲಿಯೂ ಹಾಕಲಾಗಿದ್ದು, ಅಲ್ಲಿಯೂ 600 ಕಮೆಂಟ್ಸ್ ಹಾಗೂ 1000 ಲೈಕ್ ಸಿಕ್ಕಿತ್ತು.

ಈ ಕಾರ್ ನ ಹಿಂದಿನ ರಹಸ್ಯ ಈಗ ಬಯಲಾಗಿದೆ. ಖ್ಯಾತ ವಕೀಲ ವಿ.ಜೆ. ಮ್ಯಾಥ್ಯೂ ಅವರಿಗೆ ಈ ಕಾರ್ ಸೇರಿದ್ದಾಗಿದೆ. 2014 ರಲ್ಲಿ ಮ್ಯಾಥ್ಯೂ ತಮ್ಮ ಹಣದಿಂದ ಈ ಕಾರ್ ಖರೀದಿ ಮಾಡಿದ್ದರು. ಈ ಬಗ್ಗೆ ಮ್ಯಾಥ್ಯೂರನ್ನು ಮಾಧ್ಯಮಗಳು ಸಂಪರ್ಕಿಸಿದ ವೇಳೆ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿ ಕುರಿತು ಹರಿಹಾಯ್ದಿದ್ದಾರೆ. ಕಡಲ ನಿರ್ವಹಣಾ ಮಂಡಳಿಯ ಅಧ್ಯಕನಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಸರ್ಕಾರದಿಂದ ಬಿಡಿಗಾಸು ಪಡೆದಿಲ್ಲ. ನನ್ನ ಸ್ವಂತ ಹಣದಿಂದ ಕಾರ್ ಖರೀದಿಸಿರುವೆ. ಸರ್ಕಾರದಿಂದ ಪೆಟ್ರೋಲ್ ಖರ್ಚನ್ನೂ ಸಹ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಸಾಮಾಜಿಕ ತಾಣದಲ್ಲಿ ಇಷ್ಟು ದಿನಗಳ ಕಾಲ ಸದ್ದು ಮಾಡುತ್ತಿದ್ದ ಸುದ್ದಿಗೆ ಈಗ ತೆರೆ ಬಿದ್ದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...