alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಟಿಯಲ್ಲಿದ್ದರೂ 19 ವರ್ಷಗಳಿಂದ ಕತ್ತಲ ಜೀವನ

guja city 15

ಅಹಮದಾಬಾದ್: ಗುಜರಾತ್ ರಾಜ್ಯದ ಅಹಮದಾಬಾದ್ ನಂತಹ ನಗರದಲ್ಲಿದ್ದರೂ, ಈ ಕುಟುಂಬ ಕಳೆದ 19 ವರ್ಷಗಳಿಂದ ಕತ್ತಲಿನಲ್ಲಿಯೇ ಜೀವನ ಸಾಗಿಸುತ್ತಿದೆ. ಕರೆಂಟ್ ಇಲ್ಲದ ಕಾರಣ, ಇಷ್ಟು ವರ್ಷಗಳಿಂದ ಅವರಿಗೆ ದೀಪವೇ ಆಸರೆಯಾಗಿದೆ.

ಈ ಮನೆಯ ಮಕ್ಕಳು ದೀಪದ ಬೆಳಕಿನಲ್ಲಿಯೇ ಓದಬೇಕಿದೆ. ಈ ಕುಟುಂಬದ ಯುವತಿ 19 ವರ್ಷದ ಮನಿಷಾ ಸುರೇಲಾ, ನಗರದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ತಮ್ಮ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮನವಿ ಮಾಡಿದ್ದಳು. ವಿದ್ಯುತ್ ಸರಬರಾಜು ಕಂಪನಿಗೆ ಹಲವಾರು ಬಾರಿ ಅರ್ಜಿ ಸಲ್ಲಿಸಿದ್ದರೂ, ತಮ್ಮ ಮನೆಗೆ ಇನ್ನೂ ವಿದ್ಯುತ್ ಸಂಪರ್ಕ ನೀಡಿಲ್ಲ. ಇದರಿಂದಾಗಿ ಓದಲು ಕಷ್ಟವಾಗುತ್ತಿದೆ ಎಂದು ದ್ವಿತೀಯ ವರ್ಷದ ಬಿಕಾಂ ವಿದ್ಯಾರ್ಥಿನಿಯೂ ಆಗಿರುವ ಮನಿಷಾ ನ್ಯಾಯಾಲಯಕ್ಕೆ ತಿಳಿಸಿದ್ದರು.

ಅಸಲಿ ವಿಷಯ ಏನೆಂದರೆ, ಮನಿಷಾ ತಂದೆ ಮತ್ತು ಅಜ್ಜನ ನಡುವೆ ಆಸ್ತಿ ವಿಚಾರವೇ ಇದಕ್ಕೆಲ್ಲಾ ಕಾರಣ. ಅಜ್ಜ ಮನೆಯನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಅಪ್ಪನ ಹೆಸರಿನಲ್ಲಿ ಆಸ್ತಿ ಇದೆ. ಈ ವಿವಾದದಿಂದಾಗಿಯೇ ಕಳೆದ 19 ವರ್ಷಗಳಿಂದ ಈ ಮನೆಗೆ ಕರೆಂಟ್ ಇಲ್ಲ ಎನ್ನಲಾಗಿದೆ.

ಸರ್ಕಾರಿ ಕಚೇರಿ, ವಿದ್ಯುತ್ ಸರಬರಾಜು ಕಂಪನಿಗಳಿಗೆ ಸೂಚನೆ ನೀಡಿ, ಮೇಘಾನಿ ನಗರದಲ್ಲಿರುವ ನಮ್ಮ ಚಿಕ್ಕ ಮನೆಗೆ ಕರೆಂಟ್ ಕೊಡಿಸಬೇಕು. ಮನೆಯಲ್ಲಿ ಸಹೋದರಿ, ಸಹೋದರ ಓದಲು ತೊಂದರೆಯಾಗಿದೆ ಎಂದು ಮನಿಷಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...