alex Certify
ಕನ್ನಡ ದುನಿಯಾ       Mobile App
       

Kannada Duniya

ICSE ವಿದ್ಯಾರ್ಥಿಗಳಿಗೆ ಖುಷಿ ಸುದ್ದಿ….

ICSE ವಿದ್ಯಾರ್ಥಿಗಳಿಗೆ ಖುಷಿ ಸುದ್ದಿಯಿದೆ. ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷಾ ಪರಿಷತ್ತು 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳ ಪಾಸ್ ಪರ್ಸೆಂಟೇಜ್ ಅನ್ನು ಇಳಿಕೆ ಮಾಡುವಂತೆ ಸೂಚಿಸಿದೆ. 2019ರಿಂದ ಹೊಸ ನಿಯಮ ಜಾರಿಗೆ ಬರಲಿದೆ.

ICSE ಕನಿಷ್ಠ ಉತ್ತೀರ್ಣ ಮಾನದಂಡ ಉಳಿದ ಬೋರ್ಡ್ ಎಕ್ಸಾಮ್ ಗಳಿಗೆ ಸರಿಸಮನಾಗಿರುತ್ತದೆ. ICSEಯಲ್ಲಿ ಉತ್ತೀರ್ಣ ಅಂಕ ಶೇ.35ರಷ್ಟಿತ್ತು, ಅದನ್ನು ಶೇ.33ಕ್ಕೆ ಇಳಿಕೆ ಮಾಡಲಾಗಿದೆ. ISC ಬೋರ್ಡ್ ಪಾಸ್ ಮಾರ್ಕ್ಸ್ ಶೇ.40ರಷ್ಟಿದ್ದುದ್ದನ್ನು ಶೇ.35ಕ್ಕೆ ಇಳಿಕೆ ಮಾಡಲಾಗಿದೆ.

ಮಾನವ ಸಂಪನ್ಮೂಲ ಸಚಿವಾಲಯ ಹಾಗೂ ವಿವಿಧ ಪರೀಕ್ಷಾ ಮಂಡಳಿಗಳ ಜೊತೆ ಸಭೆ ನಡೆಸಿ ಈ ತೀರ್ಮಾನಕ್ಕೆ ಬರಲಾಗಿದೆ. ಎಲ್ಲಾ ಪರೀಕ್ಷಾ ಮಂಡಳಿಗಳ ಮಧ್ಯೆ ಸಮಾನತೆ ತರಬೇಕು ಅನ್ನೋ ಒತ್ತಾಯ ಮೊದಲಿನಿಂದ್ಲೂ ಇತ್ತು. ಹಾಗಾಗಿ ಬದಲಾವಣೆ ಮಾಡಲಾಗಿದ್ದು, ಎಲ್ಲಾ ಶಾಲೆಗಳಲ್ಲೂ ಇದನ್ನು ಜಾರಿಗೆ ತರುವಂತೆ ಸುತ್ತೋಲೆ ಹೊರಡಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...