alex Certify
ಕನ್ನಡ ದುನಿಯಾ       Mobile App
       

Kannada Duniya

ಸಾರ್ವಜನಿಕ ಪ್ರದೇಶದಲ್ಲಿ ಸರ್ಕಸ್ ಆನೆಯ ದಾಂಧಲೆ

pl-10

ಮಹಾರಾಷ್ಟ್ರದ ಪುಣೆಯ ಜನರು ಬುಧವಾರ ಮನೆಯಿಂದ ಹೊರಗೆ ಬರಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸರ್ಕಸ್ ಆನೆಯೊಂದು ಜನರಲ್ಲಿ ಭಯ ಹುಟ್ಟಿಸಿತ್ತು. ಸಾರ್ವಜನಿಕ ಪ್ರದೇಶಕ್ಕೆ ಬಂದ ಆನೆ ಹಾವಳಿ ಶುರು ಮಾಡಿತ್ತು. ಇದರಿಂದ ಹೆದರಿದ ಜನರು ಅಲ್ಲಿ-ಇಲ್ಲಿ ಅಡಗಿ ಕುಳಿತುಕೊಂಡಿದ್ರು.

ತಕ್ಷಣ ಕಾರ್ಯಾಚರಣೆಗಿಳಿದ ಮುನ್ಸಿಪಲ್ ಸಿಬ್ಬಂದಿ ಆನೆಯನ್ನು ಹಿಡಿಯುವಲ್ಲಿ ಯಶಸ್ವಿಯಾದ್ರು. ಅರಣ್ಯ ಇಲಾಖೆ ಸಿಬ್ಬಂದಿ ಜೊತೆ ಮಾತುಕತೆ ಕೂಡ ನಡೆಸಿದ್ದಾರೆ. ಸರ್ಕಸ್ಸೊಂದರಲ್ಲಿ ಕೆಲಸ ಮಾಡುವ ಆನೆ ಇದಾಗಿದೆ.

ಸರ್ಕಸ್ ಕಂಪನಿ ಜುಲೈನಲ್ಲಿಯೇ ಬೆಂಗಳೂರಿಗೆ ಶಿಫ್ಟ್ ಆಗಿದೆ. ಸಾರಿಗೆ ಪರವಾನಿಗೆ ಸಿಗದ ಹಿನ್ನೆಲೆಯಲ್ಲಿ ಕಂಪನಿ, ಆನೆಯನ್ನು ಇಲ್ಲಿಯೇ ಬಿಟ್ಟು ಹೋಗಿದೆ. ಸರ್ಕಸ್ ಕಂಪನಿಯ ಇನ್ನೂ ನಾಲ್ಕು ಆನೆಗಳು ಸರ್ಕಸ್ ಮೈದಾನದಲ್ಲಿಯೇ ಇವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...