alex Certify
ಕನ್ನಡ ದುನಿಯಾ       Mobile App
       

Kannada Duniya

ಮಧ್ಯ ರಾತ್ರಿ ಬೇಕಾದರೂ ಬ್ಯಾಂಕ್ ಗೆ ಹೋಗಿ

bankcounter_reuters

ಇನ್ನು ಮುಂದೆ ಅಯ್ಯೋ,. ಬ್ಯಾಂಕ್ ಟೈಮ್ ಮುಗಿದೋಯ್ತು, ಹಣ ಕಟ್ಟಬೇಕಿತ್ತು, ಶಾಪಿಂಗ್ ಮಾಡೋಕೆ ಲೇಟಾಯ್ತು ಅಂತಾ ತಲೆ ಕೆಡಿಸಿಕೊಳ್ಳುವ ಅಗತ್ಯವೇ ಇರಲ್ಲ. ಏಕೆ ಅಂತೀರಾ..? ಈ ಸ್ಟೋರಿ ಓದಿ.

ಹೌದು. ವಾರದ ಏಳು ದಿನ 24 ಗಂಟೆಗಳ ಕಾಲ ಅಂಗಡಿ, ಮಾಲ್ ಮತ್ತು ಚಿತ್ರಮಂದಿರಗಳನ್ನು ತೆರೆದಿಡಲು ಅವಕಾಶ ಕಲ್ಪಿಸುವ ಕುರಿತಾಗಿ ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ಹೀಗಾಗಿಯೇ ಮಾಡೆಲ್ ಶಾಪ್ಸ್ ಅಂಡ್ ಎಸ್ಟಾಬ್ಲಿಷ್ ಮೆಂಟ್ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಿದ್ದು, ಹಾಗಾಗಿ ಗ್ರಾಹಕರಿಗೆ ಬಿಡುವಾದಾಗ ಬ್ಯಾಂಕ್ ಅಥವಾ ಮಾಲ್ ಗಳಿಗೆ ತೆರಳಬಹುದಾಗಿದೆ.

ಅಲ್ಲದೇ ಈ ಹೊಸ ತಿದ್ದುಪಡಿಯಿಂದ ಬ್ಯಾಂಕ್, ಶಾಪಿಂಗ್ ಮಾಲ್ ಮತ್ತು ಗೋಡೌನ್ ಗಳಿಗೆ ದಿನದ 24 ತಾಸು ಉದ್ಯಮ ನಡೆಸಲು ಅವಕಾಶ ಲಭಿಸುವುದರ ಜತೆಗೆ ಅಲ್ಲಿನ ಕಾರ್ಮಿಕರಿಗೆ ಅಗತ್ಯ ಮೂಲಸೌಲಭ್ಯ ಮತ್ತು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಕ್ಯಾಬ್ ವ್ಯವಸ್ಥೆ ಕಡ್ಡಾಯವಾಗಿ ಇರಬೇಕೆಂಬ ನಿಯಮವೂ ಇರುತ್ತದೆ. ಆದರೆ ಈ ಹೊಸ ಕಾನೂನು ಸರ್ಕಾರಿ ಕಚೇರಿ ಮತ್ತು ಭಾರತೀಯ ರಿಸರ್ವ್ ಬ್ಯಾಂಕಿಗೆ ಅನ್ವಯವಾಗುವುದಿಲ್ಲ. ಭಾರತ ಸರ್ಕಾರವೇ ಈ ಕಾನೂನನ್ನು ರೂಪಿಸಿದರೂ ಅದನ್ನು ಜಾರಿಗೆ ತರುವ ಆಯ್ಕೆಯನ್ನು ರಾಜ್ಯಗಳಿಗೆ ಬಿಡಲಿದ್ದು ಅಷ್ಟೇ ಅಲ್ಲ , ಈ ಕಾಯ್ದೆಯನ್ನು ತನಗೆ ಬೇಕಾದಂತೆ ಅಳವಡಿಕೆ ಮತ್ತು ತಿದ್ದುಪಡಿ ಮಾಡುವ ಅಧಿಕಾರವನ್ನು ಕೂಡ ರಾಜ್ಯಗಳಿಗೆ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...