alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವಿರ ಸಾಂತಾಕ್ಲಾಸ್ ರಚಿಸಿ ವಿಶ್ವ ದಾಖಲೆ ಬರೆದ ಸುದರ್ಶನ್

jjjjj

ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ವಿಶ್ವ ದಾಖಲೆ ಬರೆದಿದ್ದಾರೆ. ಕ್ರಿಸ್ಮಸ್ ದಿನ ಸುಂದರ ಕಡಲ ತೀರದಲ್ಲಿ ಸಾವಿರ ಸಾಂತಾಕ್ಲಾಸ್ ರಚಿಸಿ ದಾಖಲೆ ಮಾಡಿದ್ದಾರೆ. ಈ ಮೂಲಕ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಸೇರುವ ನಿರೀಕ್ಷೆಯಲ್ಲಿದ್ದಾರೆ.

ಲಿಮ್ಕಾ ಬುಕ್ ಆಫ್ ರೆಕಾರ್ಡ್ ನ ಹಿರಿಯ ಸಂಪಾದಕರು ಇ-ಮೇಲ್ ಮೂಲಕ ಸುದರ್ಶನ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಅಲ್ಲದೆ ವಿಶ್ವ ದಾಖಲೆಯಲ್ಲಿ ಹೆಸರು ಸೇರ್ಪಡೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆಂದು ಸುದರ್ಶನ್ ತಿಳಿಸಿದ್ದಾರೆ. ಹಿಂದಿನ ದಾಖಲೆ ಕೂಡ ಸುದರ್ಶನ್ ಹೆಸರಿನಲ್ಲಿಯೇ ಇದೆ. ಆಗ ಸುದರ್ಶನ್ 500 ಸಾಂತಾಕ್ಲಾಸ್ ರಚನೆ ಮಾಡಿದ್ದರು.

ಪುರಿಯಲ್ಲಿ ಈ ಹಬ್ಬ ಕ್ರಿಸ್ಮಸ್ ರಾತ್ರಿಯಿಂದ ಶುರುವಾಗಿದ್ದು, ಜನವರಿ 1 ರವರೆಗೆ ನಡೆಯಲಿದೆ. ನಾಲ್ಕು ದಿನಗಳ ಕಾಲ ಸುದರ್ಶನ್ ಹಾಗೂ ಅವರ 35 ವಿದ್ಯಾರ್ಥಿಗಳು ಕೆಲಸ ಮಾಡಿದ್ದಾರೆ. ಇದಕ್ಕಾಗಿ ಸುಮಾರು 1000 ಟನ್ ಮರಳನ್ನು ಬಳಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...