alex Certify
ಕನ್ನಡ ದುನಿಯಾ       Mobile App
       

Kannada Duniya

ಕುಡಿತಕ್ಕೆ ಹಣ ಕೊಡದ ತಾಯಿಗೆ ಸಾವಿನ ಶಿಕ್ಷೆ…!

ಚಿತ್ತೂರ್ ಜಿಲ್ಲೆಯ ಸಿವುನಿ ಕುಪ್ಪಂ ಎಂಬಲ್ಲಿ 29 ವರ್ಷದ ಯುವಕನೊಬ್ಬ ತನ್ನ ತಾಯಿಯನ್ನೇ ಹತ್ಯೆ ಮಾಡಿದ್ದಾನೆ. ಮದ್ಯ ಖರೀದಿಸಲು ಹಣ ಕೊಡಲಿಲ್ಲ ಅನ್ನೋ ಕೋಪಕ್ಕೆ ಈ ಕೃತ್ಯ ಎಸಗಿದ್ದಾನೆ.

ಆರೋಪಿ ಸುಬ್ರಮಣ್ಯಂ ಮದ್ಯಕ್ಕೆ ದಾಸನಾಗಿದ್ದ. ಪತ್ನಿ ಕೂಡ ಅವನನ್ನು ಬಿಟ್ಟು ಹೋಗಿದ್ಲು. ಹಾಗಾಗಿ ಒಂಟಿಯಾಗಿ ವಾಸಿಸುತ್ತಿದ್ದ. ಆಗಾಗ ತಾಯಿ ಬೆಳ್ಳಮ್ಮ ಜೊತೆಗೆ ಜಗಳ ತೆಗೆದು ಹಣ ಕೊಡುವಂತೆ ಪೀಡಿಸುತ್ತಿದ್ದ. ಸೋಮವಾರ ಕೂಡ ತಾಯಿಯ ಬಳಿ ಮದ್ಯ ಖರೀದಿಸಲು ಹಣ ಕೊಡುವಂತೆ ಕೇಳಿದ್ದಾನೆ.

ಆಕೆ ಕೊಟ್ಟಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಸುಬ್ರಮಣ್ಯಂ ತಾಯಿ ನಿದ್ದೆ ಮಾಡುತ್ತಿದ್ದಾಗ ಆಕೆಯ ಕುತ್ತಿಗೆಗೆ ಬೆಡ್ ಶೀಟ್ ಸುತ್ತಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮಂಗಳವಾರ ಬೆಳಗ್ಗೆ ಬೆಳ್ಳಮ್ಮಳ ಮಗಳು ಮನೆಗೆ ಬಂದಾಗ  ವಿಷಯ ಬಹಿರಂಗವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...